ಬೆಳಗಾವಿಯ ವಿಜಯಾ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಹಿಜಾಬ್ ದಂಗಲ್ ಇನ್ನು ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಇಂದು ಕೂಡ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡೇ ಕಾಲೇಜಿಗೆ ಬಂದು ಪ್ರತಿಭಟನೆಗೆ ಮುಂದಾಗಿದ್ದರಿಂದ ಪ್ರಾಂಶುಪಾಲ ಪ್ರಕಾಶ ಪಾಟೀಲ್ ಕಾಲೇಜಿಗೆ ಅನಿರ್ಧಿಷ್ಟಾವಧಿವರೆಗೆ ರಜೆ ಘೋಷಿಸಿದ್ದಾರೆ.

ಹೌದು ಬೆಳಗಾವಿಯ ಬೆಳಗಾವಿಯ ವಿಜಯಾ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಹಿಜಾಬ್‍ಗಾಗಿ ಮುಸ್ಲಿಂ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಕಳೆದ ಎರಡು ದಿನಗಳಿಂದ ಕಾಲೇಜು ಗೇಟ್ ಮುಂದೆ ಧರಣಿ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ, ಕಾಲೇಜು ಪ್ರಾಂಶುಪಾಲರು, ಪ್ರಾಧ್ಯಾಪಕರು, ಪೊಲೀಸ್ ಅಧಿಕಾರಿಗಳು ಅದೆಷ್ಟೇ ಮನವಲಿಸಲು ಪ್ರಯತ್ನಿಸಿದರೂ ಕೂಡ ವಿದ್ಯಾರ್ಥಿನಿಯರು ಮಾತ್ರ ಜಪ್ಪಯ್ಯ ಎನ್ನುತ್ತಿಲ್ಲ. ಇಂದು ಶನಿವಾರವೂ ಹಿಜಾಬ್ ಧರಿಸಿ ಕಾಲೇಜಿಗೆ 15 ವಿದ್ಯಾರ್ಥಿನಿಯರು ಆಗಮಿಸಿದ್ದರು. ಹಿಜಾಬ್, ಬುರ್ಖಾ ಧರಿಸಿಯೇ ಕಾಲೇಜು ಆವರಣ ಪ್ರವೇಶಿಸಿದರು. ಇನ್ನು ವಾಪಸ್ ಮನೆಗೆ ಹೋಗಿದ್ದ ಇಬ್ಬರು ವಿದ್ಯಾರ್ಥಿನಿಯರು ವಾಪಸ್ ಕಾಲೇಜಿಗೆ ಬಂದರು. ಡಿಪೆÇ್ಲೀಮಾ, ಪದವಿ ಕಾಲೇಜಿಗೆ ಹೈಕೋರ್ಟ್ ಮಧ್ಯಂತರ ಆದೇಶ ಅನ್ವಯಿಸಲ್ಲ. ಹಿಜಾಬ್ ಧರಿಸಿಯೇ ಕ್ಲಾಸ್‍ಗೆ ಅವಕಾಶ ನೀಡುವಂತೆ ಕ್ಲಾಸ್ ಮುಂದೆಯೇ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳ ಮನವಲಿಸಲು ಪ್ರಾಂಶುಪಾಲ ಪ್ರಕಾಶ ಪಾಟೀಲ್ ಹರಸಾಹಸ ಪಟ್ಟರು.
ಪ್ರಾಂಶುಪಾಲ ಪ್ರಕಾಶ ಪಾಟೀಲ್ ಅವರ ಮನವಲಿಕೆಗೆ ವಿದ್ಯಾರ್ಥಿನಿಯರು ಮಣಿಯಲಿಲ್ಲ. ಇದರಿಂದ ಅನಿವಾರ್ಯವಾಗಿ ಜಿಲ್ಲಾಧಿಕಾರಿಗಳ ಮುಂದಿನ ಆದೇಶದವರೆಗೆ ಅನಿರ್ಧಿಷ್ಟಾವಧಿವರೆಗೆ ಕಾಲೇಜಿಗೆ ರಜೆ ಘೋಷಿಸಿದರು. ಈ ಸಂಬಂಧ ಮಾತನಾಡಿರುವ ಪ್ರಾಂಶುಪಾಲರು ಕಳೆದ ಎರಡು ದಿನಗಳಿಂದ ವಿದ್ಯಾರ್ಥಿಗಳನ್ನ ವೈಯಕ್ತಿಕವಾಗಿ ಮನವೊಲಿಕೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಜೊತೆಗೆ ಒನ್ ಟು ಒನ್ ಮಾತುಕತೆ ಮಾಡಲಾಗಿದೆ. ಆದ್ರೆ ಹಿಜಾಬ್‍ಗೆ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರಿಂದ ನಮಗೆ ತೊಂದರೆ ಆಗ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಇವತ್ತಿನಿಂದ ರಜೆ ಘೋಷಣೆ ನಿರ್ಧಾರಿಸಲಾಗಿದ್ದು. ಜಿಲ್ಲಾಧಿಕಾರಿಗಳ ಮುಂದಿನ ಆದೇಶ ಬರೋವರೆಗೂ ರಜೆ ಇರುತ್ತದೆ. ವಿದ್ಯಾರ್ಥಿಗಳಿಗೆ ಯಾವ ತೊಂದರೆ ಆಗದಂತೆ ಶಿಕ್ಷಣ ಕೊಡಲಾಗುತ್ತದೆ. ಪ್ರಕರಣ ಸುಖ್ಯಾಂತ ಆದ ಮೇಲೆ ಮತ್ತೆ ತರಗತಿ ಪ್ರಾರಂಭಿಸುತ್ತೇವೆ. ಆನ್‍ಲೈನ್ ಕ್ಲಾಸ್‍ಗಳನ್ನ ಮಾಡೊದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಕಾಲೇಜಿಗೆ ರಜೆ ಘೋಷಿಸುತ್ತಿದ್ದಂತೆ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಿಗೆ ವಾಪಸ್ಸಾದರು. ಈ ವೇಳೆ ಕಾಲೇಜು ಸುತ್ತಮುತ್ತಲೂ ಬಿಗಿಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಒಟ್ಟಿನಲ್ಲಿ ಹಿಜಾಬ್ ವಿವಾದ ಇದೇ ರೀತಿ ಮುಂದುವರಿದ್ರೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಪೆಟ್ಟು ಬೀಳುವ ಸಾಧ್ಯತೆಯಿದೆ. ಹೀಗಾಗಿ ಆದಷ್ಟು ಬೇಗನೇ ಕೋರ್ಟ ಈ ಬಗ್ಗೆ ಸ್ಪಷ್ಟ ನಿರ್ಧಾರ ಹೊರಡಿಸಿ ಈ ವಿವಾದಕ್ಕೆ ಅಂತ್ಯ ಹಾಡಬೇಕಿದೆ.