ತಾಳೆ ಬೆಳೆಯನ್ನು ಬೆಳೆಯುವುದರಿಂದ ರೈತರ ಆರ್ಥಿಕ ಅಭಿವೃದ್ಧಿವಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಹಾಂತೇಶ ಮುರುಗೋಡ ತಿಳಿಸಿದರು.

ಅವರು ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಪ್ರಗತಿಪರ ರೈತರಾದ ಅಪ್ಪಾಸಾಬ ಸೌಂದಲಗೆ ಅವರ ತೋಟದಲ್ಲಿ ರೈತರಿಗೆ ತಾಳೆ ಬೆಳೆಯ ತರಬೇತಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿ ಮಹಾಂತೇಶ ಮುರಗೋಡ ಅವರು ತಾಳೆ ಬೆಳೆಯು ಉತ್ತಮವಾದ ಬೆಳೆಯಾಗಿದೆ.ಕಬ್ಬು ಸೇರಿದಂತೆ ಇನ್ನಿತರ ಬೆಳೆಗಳಿಗೆ ಹೊಂದಾಣಿಕೆ ಮಾಡಿದರೆ ತಾಳೆ ಬೆಳೆಯುವ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು. ತಾಳೆಯು ಎಲ್ಲಾ ಋತುವಿನ 25 ವರ್ಷಗಳವರೆಗೆ ಕನಿಷ್ಠ ನಿರ್ವಹಣೆಯ ಬೆಳೆಯಾಗಿದೆ.3 ಎಫ್ ಆಯಿಲ್ ಪಾಮ್ ಕಂಪನಿಯ ಬೈಬಾಕ್ ವ್ಯವಸ್ಥೆಯಡಿಯಲ್ಲಿ ಖರೀದಿ ಮಾಡುತ್ತೆ.ತಾಳೆ ಬೆಳೆಗೆ ಸರ್ಕಾರ ಪ್ರತಿ ಟನ್ ಗೆ 12 ಸಾವಿರ ರೂಪಾಯಿ ದರವನ್ನು ನಿಗದಿ ಮಾಡಿದೆ.ಪ್ರತಿ ಎಕರೆಗೆ 15 ಟನ್ ದವರೆಗೆ ತಾಳೆ ಬೆಳೆಯು ಇಳುವರಿಯನ್ನು ನೀಡುತ್ತದೆ. ಈ ಹಿನ್ನೆಲೆಯಲ್ಲಿ ರೈತರು ತಾಳೆ ಬೆಳೆಯನ್ನು ಬೆಳೆದು ಹೆಚ್ಚಿನ ಲಾಭವನ್ನು ಪಡೆಯರಿ ಎಂದು ಮಹಾಂತೇಶ ಮುರಗೊಡ ಅವರು ತಿಳಿಸಿದರು.

ನಂತರ ಪ್ರಗತಿಪರ ರೈತರಾದ ಅಪ್ಪಾಸಾಹೇಬ ಸೌಂದಲಗೆಯವರು ಮಾತನಾಡಿ ತಾಳೆ ಬೆಳೆಯು ಉತ್ತಮವಾದ ಬೆಳೆಯಾಗಿದೆ.ರೈತರ ಹಿತಾಸಕ್ತಿ ಕಾಪಾಡುವುದರಲ್ಲಿ ತಾಳೆ ಬೆಳೆಯ ಪಾತ್ರ ದೊಡ್ಡದು,ಕಳೆದ ೧೦ ವರ್ಷಗಳಿಂದ ನನ್ನ ತೋಟದಲ್ಲಿ ನಾನು ತಾಳೆ ಬೆಳೆಯನ್ನು ಬೆಳೆಯುತ್ತಿದ್ದೇನೆ.ಕಬ್ಬು ಹಾಗೂ ತಾಳೆ ಬೆಳೆಗೆ ಹೊಂದಾಣಿಕೆಯನ್ನು ಮಾಡಿ ನೋಡಿದಾಗ ತಾಳೆಯು ಬೆಳೆಯು ಉತ್ತಮ.ಈ ಹಿನ್ನೆಲೆಯಲ್ಲಿ ರೈತರು ತಾಳೆ ಬೆಳೆಯನ್ನು ಬೆಳೆದು ಆರ್ಥಿಕವಾಗಿ ಪ್ರಗತಿ ಹೊಂದಿ ಎಂದು ರೈತ ಅಪ್ಪಾಸಾಹೇಬ ಸೌಂದಲಗೆ ಅವರು ತಿಳಿಸಿದರು.
ಈ ಸಂಧರ್ಭದಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಾರುತಿ ಕಳ್ಳಿಮನಿ,ಸಹಾಯಕ ತೋಟಗಾರಿಕೆ ನಿರ್ದೇಶಕ ಮಹಮ್ಮದ್ ಅಜರುದ್ದಿನ್,ರೈತರಾದ ಅಣ್ಣಾಸಾಹೇಬ ಪವಾರ, ಸಿದ್ದಪ್ಪ ಚೌಗಲೆ,ಜಿ.ಎಂ.ನದಾಫ,ಎಂ. ಎಚ್.ಅಂಗಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.