ಬೆಂಗಳೂರಿನ ಗವಿಪುರ ಶ್ರೀ ಭವಾನಿ ಪೀಠದ ಗೋಸಾಯಿ ಮಹಾ ಸಂಸ್ಥನಮಠದ ಶ್ರೀ ಮಂಜುನಾಥ ಸ್ವಮಿಜಿ ಇಂದು ಹುಕ್ಕೇರಿ ಮಠಕ್ಕೆ ಭೇಟಿ ನೀಡಿದರು.

ಭವಾನಿ ಪೀಠದ ಗೋಸಾಯಿ ಮಹಾ ಸಂಸ್ಥನಮಠದ ಶ್ರೀ ಮಂಜುನಾಥ ಸ್ವಮಿಜಿ ಇಂದು ಹುಕ್ಕೇರಿ ಮಠಕ್ಕೆ ಭೇಟಿ ನೀಡಿದ ಈ ಸಂದರ್ಭದಲ್ಲಿ ಡಾ. ಸೋನಾಲಿ ಸರನೋಬತ್ ತಮ್ಮ ಮಗ ಶ್ರೀಜೋತ್ ಹಾಗೂ ಮಾವನವರಾದ ಸದಾನಂದ ಸರನೋಬತ್ ಮಂಜುನಾಥ ಸ್ವಾಮಿಜಿ ಹಾಗೂ ಹುಕ್ಕೇರಿ ಮಠದ ಶ್ರೀಗಳನ್ನು ಸನ್ಮಾನಿಸಿದರು. ತದನಂತರ ಮಂಜುನಾಥ ಸ್ವಾಮಿಜಿಗಳು ಡಾ.ಸೀನಾಲಿ ಸರನೋಬತ್‍ರ ಮನೆಗೆ ಭೇಟಿ ನೀಡಿದರು.
ಇನ್ನು ಮಂಜುನಾಥ ಸ್ವಾಮಿಜಿಗಳ ಪಟ್ಟಾಶಿಭಿಷೇಕ ಸಮಾರಂಭವು ಇದೇ ಫೆಬ್ರುವರಿ 10ರಿಂದ 14ರ ವರೆಗೆ ನಡೆಯಲಿದ್ದು ಆ ವರೆಗೆ ಸ್ವಾಮಿಜಿಗಳು ಗೌರವಾನ್ವಿತ ಮಠಗಳು ಹಾಗೂ ಸಂತರನ್ನು ಭೇಟಿ ಮಾಡಿ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಮಂಜುನಾಥ ಸ್ವಾಮಿಜಿ ಡಾ. ಸೋನಾಲಿ ಸರನೋಬತ್ ಕುಟುಂಬದವರನ್ನು ಆಶೀರ್ವದಿಸಿದರು.