Belagavi

ಜಿಲ್ಲಾ ವೆಜಿಟೇಬಲ್ ಗ್ರೋವರ್ಸ್, ಸೆಲ್ಲರ್ಸ್, ಆಂಡ್ ಪರ್ಚೇಜರ್ಸ್ ಕೋ ಆಪರೇಟವ್ ಸೊಸೈಟಿ ಗ್ರಾಹಕರಿಗೆ ಹಣ ಮರುಪಾವತಿ ಮಾಡುವಂತೆ ಸಿದ್ಧಗೌಡ ಮೋದಗಿ ಒತ್ತಾಯ

Share

ಬೆಳಗಾವಿ ಜಿಲ್ಲಾ ವೆಜಿಟೇಬಲ್ ಗ್ರೋವರ್ಸ್, ಸೆಲ್ಲರ್ಸ್, ಆಂಡ್ ಪರ್ಚೇಜರ್ಸ್ ಕೋ ಆಪರೇಟವ್ ಸೊಸೈಟಿಯು ಗ್ರಾಹಕರು ತೊಡಗಿಸಿರುವ ಠೇವಣಿ, ಪಿಗ್ಮಿ, ಹಾಗೂ ಉಳಿತಾಯ ಖಾತೆಯ ಹಣವನ್ನು ಕೂಡಲೇ ಗ್ರಾಹಕರಿಗೆ ಸಂದಾಯ ಮಾಡುವಂತೆ ಭರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷರಾದ ಸಿದ್ದಗೌಡ ಮೋದಗಿ ಒತ್ತಾಯಿಸಿದರು.

ಬೆಳಗಾವಿ ನಗರದ ಸರಕಾರಿ ಎಪಿಎಂಸಿ ಆವಣದಲ್ಲಿ ರೈತರೊಂದಿಗೆ ಚರ್ಚೆ ನಡೆಸಿದ ಅವರು, ಬೆಳಗಾವಿ ಜಿಲ್ಲಾ ವೆಜಿಟೇಬಲ್ ಗ್ರೋವರ್ಸ್, ಸೆಲ್ಲರ್ಸ್, ಆಂಡ್ ಪರ್ಚೇಜರ್ಸ್ ಕೋ ಆಪರೇಟವ್ ಸೊಸೈಟಿ 1999-2000 ರ ಇಸ್ವಿಯಲ್ಲಿ ಪ್ರಾರಂಭವಾಗಿ ತನ್ನ ಕಾರ್ಯವನ್ನು ಉತ್ತಮವಾಗಿ ನಡೆಸುತ್ತಿ ಕೆಲ ಕಾರ್ಯ ನಿರ್ವಹಸಿದೆ. ತದನಂತರ ಆಡಳಿತ ನಂಡಳಿಯ ನಿರ್ಲಕ್ಷದಿಂದಾಗಿ ಸಂಸ್ಥೆ ಅವನತಿಯ ಅಂಚಿನತ್ತ ಸಾಗಿದೆ. ಹಾಗಾಗಿ 2016-17 ನೇ ಸಾಲಿನಿಂದ ಮುದ್ದತಿ ಠೇವಣಿ ಅವಧಿ ಮುಗಿದರೂ ಕೂಡ ಹಿಂದಿರುಗಿಸಿಲ್ಲ. ಇನ್ನು ಚಾಲ್ತಿ ಖಾತೆ ಹಾಗೂ ಉಳಿಯಾತ ಖಾತೆ ಹಣ, ಹಾಗೂ ಪಿಗ್ಮಿ ಹಣವನ್ನೂ ಕೂಡ ಹಿಂದಿರುಗಿಸಿಲ್ಲ. ಇದರಿಂದ ರೈತರು ಹಾಗೂ ವ್ಯಾಪಾರಸ್ಥರು ಜೀವನ ನಡೆಸಲು ತೊಂದರೆಯಾಗಿದೆ.

ಹಾಗಾಗಿ ಕೂಡಲೇ ರೈತರ ಹಣವನ್ನು ಮರಳಿ ನೀಡಬೇಕೆಂದು ಆಮರಣ ಉಪವಾಸ ಸತ್ಯಾಗ್ರಹ ವೇದಿಕೆಯಿಂದ ರೈತ ಮುಖಂಡ ಸಿದ್ದಗೌಡ ಮೋದಗಿ ಒತ್ತಾಯಿಸಿದ್ದಾರೆ.
ಈ ಘಟನೆಯಲ್ಲಿ ಆಡಳಿತ ಮಂಡಳಿಯು ಸಹಕಾರಿ ಸಂಘಗಳ ನಿಯಮಗಳನ್ನು ಉಲ್ಲಂಘನೆ ಮಾಡಿ ಅವ್ಯಹಾರ ಮಾಡಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ಹಾಗಾಗಿ ಸಂಸ್ಥೆಯ ಆಡಳಿತ ಮಂಡಳಿಯವರು ಕೂಡಲೇ ಗ್ರಾಹಕರ ಹಣವನ್ನು ಕೂಡಲೇ ಮರಳಿ ನೀಡಬೇಕೆಂದು ಒತ್ತಾಯಿಸಿದರು.

ಒಂದು ವೇಳೆ ರೈತರ ಹಣವನ್ನು ಹಿಂದಿರುಗಿಸದಿದ್ದರೆ ಭಾರತೀಯ ಕೃಷಕ ಸಮಾಜ ಹಾಗೂ ರೈತ ಸಂಘಟನೆಗಳ ನೇತೃತ್ವದಲ್ಲಿ ಗ್ರಾಹಕರನ್ನು ಒಳಗೊಂಡಂತೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಬೆಳಗಾವಿಯಲ್ಲಿ ಹಣಕಾಸು ಸಂಸ್ಥೆಗಳು ಇತ್ತೀಚೆಗೆ ಗ್ರಾಹಕರ ಹಣಕ್ಕೆ ಬೇಜವಾಬ್ಧಾರಿಯನ್ನು ತೋರುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇನ್ನು ಹಣ ತೊಡಗಿಸಿರುವ ಎಲ್ಲಾ ಗ್ರಾಹಕರಿಗೆ ಅವರವರ ಹಣವನ್ನು ಹಿಂದಿರುಗಿಸುವ ಕೆಲಸವಾಗಬೇಕು. ಈ ಮೂಲಕ ನೊಂದ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ನ್ಯಾಯ ಸಿಗುವಂತಾಗಲಿ ಎಂಬುದು ಎಲ್ಲರ ಆಶಯ

Tags:

error: Content is protected !!