ಜಾತಿ ಧರ್ಮ ಶಿಕ್ಷಣ ಸಂಸ್ಥೆಗಳಲ್ಲಿ ಆಗಬಾರದು. ಶಿಕ್ಷಣ ಸಂಸ್ಥೆಗಳಲ್ಲಿ ಈ ರೀತಿಯ ಘಟನೆಗಳು ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಹಿಜಾಬ್ ಕೇಸರಿ ಶಾಲು ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದAತೆ ಬೆಳಗಾವಿಯಲ್ಲಿ ಕೆಪಿಸಿಸಿ ಕರ‍್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿದರು. ಜಾತಿ, ರ‍್ಮ ಶಿಕ್ಷಣ ಸಂಸ್ಥೆಗಳಲ್ಲಿ ಆಗಬಾರದು. ಹೀಗೆ ಆಗದಂತೆ ರ‍್ಕಾರ ಕ್ರಮ ಕೈಗೊಳ್ಳಬೇಕು. ಧರ್ಮಗಳು ಯಾವುದೇ ಕೇಸರಿ ಶಾಲು ಹಾಕುವಂತೆ ಹೇಳುವುದಿಲ್ಲ. ಕೆಲವು ಸಂಘಟನೆಗಳು ಈ ರೀತಿಯಾಗಿ ಹೇಳುತ್ತವೆ. ಈ ಕುರಿತಂತೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗಳು ಎಚ್ಚರಿಕೆ ವಹಿಸಬೇಕು ಎಂದರು.
ಇನ್ನು ಖಾಸಗಿ ತರಕಾರಿ ಮಾರುಕಟ್ಟೆ ವಿಚಾರವಾಗಿ ಮಾತನಾಡಿದ ಅವರು, ಮೋದಿ ರ‍್ಕಾರ ಎಪಿಎಂಸಿ ಕಾನೂನು ಎಫೆಕ್ಟ್ ಇದು. ದೇಶದಲ್ಲೇ ಮೊದಲು ಈ ರೀತಿಯ ಮಾರುಕಟ್ಟೆ ಪ್ರಯೋಗ ಮಾಡುತ್ತಿದ್ದಾರೆ. ಬೆಳಗಾವಿ ಎಪಿಎಂಸಿ ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಈಗ ಖಾಸಗಿ ಮಾರುಕಟ್ಟೆ ಬೆಳಗಾವಿಯಲ್ಲಿ ತಲೆ ಎತ್ತಿದೆ. ನನ್ನ ನಂಬಿ ಎಪಿಎಂಸಿಯಲ್ಲಿ ಸಾಕಷ್ಟು ಜನರು ಮಳಿಗೆ ಖರೀದಿಸಿದ್ದಾರೆ. ಹೀಗಾಗಿ ಅವರನ್ನ ಉಳಿಸಲು ನಾನು ಖಾಸಗಿ ಮಾರುಕಟ್ಟೆ ಮಾಡ್ತಿವಿ. ಗೋವಾ ಚುನಾವಣೆ ಮುಗಿದ ಬಳಿಕ ಸಭೆ ಮಾಡ್ತಿನಿ ಎಂದರು.
ಇನ್ನು ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದAತೆ ಮತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಪ್ರಕರಣಕ್ಕೂ ನಮಗೂ ಏನೂ ಸಂಬಂಧವೇ ಇಲ್ಲ. ಅವರೇ ಬಿ ರಿಪರ‍್ಟ್ ಆದ್ರು ಸಲ್ಲಿಸಲಿ, ಎ ರಿಪರ‍್ಟ್ ಆದ್ರು ಸಲ್ಲಿಸಲಿ ನಮಗೆನೂ ಸಂಬಂಧವಿಲ್ಲ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಇನ್ನು ಸಿಎಂ ಇಬ್ಯಾಹಿಂ ಕಾಂಗ್ರೆಸ್‌ಗೆ ಹುಡ್ ಬೈ ಹೇಳಿದ ಕುರಿತಂತೆ ಮಾತನಾಡಿದ ಅವರು, ಸಿ.ಎಂ.ಇಬ್ರಾಹಿಂ ಅವರು ಎಲ್ಲೂ ಹೋಗುವುದಿಲ್ಲ ಅವರು ನಮ್ಮ ಪಕ್ಷದಲ್ಲಿ ರ‍್ತಾರೆ ಎಂಬ ವಿಶ್ವಾಸವಿದೆ. ನಾನು ಇಬ್ರಾಹಿಂ ಅವರ ಜೊತೆಗೆ ವೈಯಕ್ತಿಕವಾಗಿ ಭೇಟಿ ಮಾಡಿ ಮಾತಾಡ್ತಿನಿ ಎಂದರು.
ಇನ್ನು ಹಿಜಾಬ್ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ರ‍್ಚೆಗೆ ಕಾರಣವಾಗುತ್ತಿದೆ. ಇನ್ನು ಸರಕಾರದ ಮಟ್ಟದಲ್ಲೂ ಇದು ಸಾಕಷ್ಟು ಆಡಳಿತಾತ್ಮಕ ಸಮಸ್ಯೆಗಳನ್ನು ತಂದೊಡ್ಡಿದೆ. ಇನ್ನು ಈ ಕುರಿತಂತೆ ಸರಕಾರ ಯಾವ ಕ್ರಮ ಕೈಗೊಳ್ಳಲಿದೆವ ಎಂದು ಕಾದು ನೋಡಬೇಕಿದೆ.
