ವೀರಶೈವ ಲಿಂಗಾಯತ ಪಂಚಮಸಾಲಿ 3ನೇ ಪೀಠ ಸ್ಥಾಪನೆ ಪರ ವಿರೋಧದ ಮಧ್ಯೆ ಕೊನೆಗೂ ಪೀಠಾರೋಹಣ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಆಲಗೂರಿನಲ್ಲಿ ನೂತನ ಪೀಠ ಸ್ಥಾಪನೆಯಾಗಿದ್ದು, ಬಬಲೇಶ್ವರದ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಮೊದಲ ಜಗದ್ಗುರುಗಳಾಗಿ ಪೀಠ ಏರಿದ್ದಾರೆ.

ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದಿಂದ ಪೀಠಾರೋಹಣ ನೆರವೇರಿದೆ. ಬ್ರಾಹ್ಮಿ ಮುಹೂರ್ತದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ಮಾಡಲಾಗಿದೆ. ಮಠದಲ್ಲಿ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿವೆ.
ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಕಾರ್ಯದರ್ಶಿ ಅಭಿನವ ಸಂಗನಬಸವ ಸ್ವಾಮೀಜಿ, ಬೆಂಡವಾಡ ಸ್ವಾಮೀಜಿ, ಸಿದ್ದಲಿಂಗದೇವರು ಸ್ವಾಮೀಜಿ ಸೇರಿದಂತೆ ವಿವಿಧ ಸ್ವಾಮೀಜಿಗಳು ಭಾಗಿಯಾಗಿದ್ರು. ವೈದಿಕರಿಂದ ಮಂತ್ರಪಠಣ ನೆರವೇರಿತು. ಮಹದೇವ ಶಿವಾಚಾರ್ಯ ಅವರಿಗಡ ರುದ್ರಾಭಿμÉೀಕ, ಹಾಲು, ಜೇನು ತುಪ್ಪ, ಸಕ್ಕರೆ, ಜಲದಿಂದ ಪಂಚಾಮೃತಾಭಿμÉೀಕ ನೆರವೇರಿದೆ.
ಬೆಳಗ್ಗೆ 5 ಗಂಟೆಗೆ ಜಗದ್ಗುರುಗಳ ಪಟ್ಟಾಭಿμÉೀಕ ನಡೀತು. 6.15 ನಿಮಿಷಕ್ಕೆ ಜಗದ್ಗುರುಗಳಿಗೆ ರುದ್ರಾಕ್ಷಿ ಕಿರೀಟಧಾರಣೆ ಜರುಗಿದೆ. ಬೆಳಗ್ಗೆ 8 ಗಂಟೆಗೆ ಆಲಗೂರ ಗ್ರಾಮದ ಕೃμÁ್ಣನದಿಗೆ ಕೃμÁ್ಣರತಿ ಕಾರ್ಯವನ್ನು ಒಕ್ಕೂಟದ ಸ್ವಾಮೀಜಿಗಳು ಹಾಗೂ ಸಮಾಜದ ಮುಖಂಡರು ನೆರವೇರಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ವೇದಿಕೆ ಕಾರ್ಯಕ್ರಮ ಇದ್ರೆ, 11 ಕ್ಕೆ ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ಗಣ್ಯರ ಉಪಸ್ಥಿತಿಯಲ್ಲಿ ಜಗದ್ಗುರುಗಳ ಸಿಂಹಾಸನರೋಹಣ ಮತ್ತು ರುದ್ರಾಕ್ಷಿ ಕಿರೀಟಧಾರಣೆ ನಡೆಯಲಿದೆ. ಬಳಿಕ ಧರ್ಮಸಭೆ, ರೈತ ವಿರಾಟ ಸಮಾವೇಶ ಜರುಗಲಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂಗನಬಸವ ಸ್ವಾಮೀಜಿ ತಿಳಿಸಿದ್ರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪೀಠದಿಪತಿಗಳಾದ ಮಹದೇವ ಶಿವಾಚಾರ್ಯ ಸ್ವಾಮಿಜಿ, ಈ ಕಾರ್ಯಕ್ರಮ ನಭೂತೂ ನ ಭವಿಷ್ಯತಿ ಎನ್ನುವಂತಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಇನ್ನು ಮೂರನೇ ಈ ಪೀಠ ಸ್ಥಾಪನೆಗೆ ಸಾಕಷ್ಟು ತೊಂದರೆಗಳು ಬಂಧರೂ ಸಮಜದ ಒಳಿತಿಗಾಗ ಮೂರನೇ ಪೀಠವನ್ನು ಸ್ಥಾಪನೆ ಮಾಡಿದ್ದಾರೆ. ಇನ್ನು ಈ ಕುರಿತು ಸಮಾಜದ ಬಾಂಧವರು ಕೂಡ ಸಾಕಷ್ಟು ಸಹಕಾರ ನೀಡಿದ್ದಾರೆ. ಇನ್ನು ಈ ಪೀಠ ಸ್ಥಾಪನೆಗೆ ಸಚಿವ ಮುರಗೇಶ್ ನಿರಾಣಿ ಮಾಡಿದ ಕಾರ್ಯವನ್ನು ಸ್ಮರಿಸಿದ ಸ್ವಾಮಿಜಿ, ತನು, ಮನ ,ಧನದಿಂದ ಕಾರ್ಯಕ್ರಮ ಯಶಸ್ವಿಯಾಗಲು ಸ್ರಮಿಸಿದ ಎಲ್ಲರನ್ನು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮುರಗೇಶ್ ನಿರಾಣಿ, ನಮ್ಮ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಕೃಷ್ಣಾ ಎಡ ಹಾಗೂ ಬಲದಂಡೆಗಳಲ್ಲಿ ಸವಳು ಜವಳು ಭೂಮಿಯ ಪುನಸ್ಚೇತನ ಕಾರ್ಯಕ್ರಮ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಪರಮ ಪೂಜ್ಯರು ನಮ್ಮನ್ನು ಪ್ರೇರೇಪಣೆ ªಮಾಡುತ್ತಿದ್ದಾರೆ. ನಾವೂ ಕೂಡ ಈ ನಿಟ್ಟಿನಲ್ಲಿ ಮುಂದುವರೆದು ಇದಕ್ಕೊಂದು ಕಾಯಕಲ್ಪವನ್ನು ಕಂಡುಕೊಳ್ಳುತ್ತೇವೆ. ಇನ್ನು ಶಿಕ್ಷಣ ವ್ಯವಸ್ಥೆಯಲ್ಲಿ 100 ವರ್ಷಕ್ಕಿಂತ ಮೊದಲು ಮಕ್ಕಳಿಗೆ ಶಕ್ಷಣ ಹಾಗೂ ಅನ್ನ ದಾಸೋಹ ಮಾಡಿದ ಕೀರ್ತಿ ಸ್ವಾಮಿಜಿಗಳಿಗೆ ಸಲ್ಲುತ್ತದೆ. ಇನ್ನು ತಮ್ಮ ಯಾವುದೇ ಸಮಸ್ಯೆಗಳಿದ್ದರೆ ನಿಮ್ಮ ಮನೆಯ ಮಗನಾಗಿ ಎಲ್ಲಾ ಸಮಾಜಗÉ್ಮೂಗ್ಗೂಡಿಸಿಕೊಂಡು ಕಾರ್ಯ ಮಾಡುತ್ತೇನೆ ಎಂದರು.
ಇನ್ನ ರಾಜ್ಯದಲ್ಲಿ ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ಕುರಿತಂತೆ ಸಾಕಷ್ಟು ವಿವಾದಗಳು ಕೇಳಿಬಂದಿದ್ದವು. ಆದರೆ ಅದಾವುದಕ್ಕೂ ಕಿವಿಗೊಡದೇ ಇಂದು ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ಮಾಡಲಾಗಿದೆ. ಇನ್ನು ಸಮಾಜದ ಎಲ್ಲರೂ ಸಹ ಒಗ್ಗೂಡಿದ್ದು ಯಶಸ್ವಿಯಾಗಿ ಮೂರನೇ ಪೀಠ ಕಾರ್ಯಾರಂಭ ಮಾಡಿದೆ.