Agriculture

ಚುರುಕುಗೊಂಡ ಬಳ್ಳಾರಿ ನಾಲಾ ಸೇತುವೆ ಕಾಮಗಾರಿ: ರೈತರು ಫುಲ್ ಖುಷ್

Share

ಬೆಳಗಾವಿಯ ಬಸವನಕುಡಚಿಯ ಹೊಲಗದ್ದೆಯಲ್ಲಿರುವ ಬಳ್ಳಾರಿ ನಾಲೆಯ ಸೇತುವೆ ಕಾಮಗಾರಿಯು ಅತ್ಯಂತ ತ್ವರಿತವಾಗಿ ನಡೆಯುತ್ತಿದೆ.

ಪ್ರತಿ ವರ್ಷ ಮಳೆಯ ಆರ್ಭಟಕ್ಕೆ ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದ್ದು, ಪ್ಲಾಸ್ಟಿಕ್ ಬಾಟಲಿಗಳು ನಾಲಾದಲ್ಲಿ ಜಲಾವೃತವಾಗಿವೆ. ಇಂಜೆಕ್ಷನ್ ಸೂಜಿ ಗದ್ದೆಯಲ್ಲಿ ಹರಡಿ ರೈತರ ಕಾಲಿಗೆ ಚುಚ್ಚುತ್ತಿದೆ. ಗ್ರಾಮಸ್ಥರು ಕಳೆದ 20 ವರ್ಷಗಳಿಂದ ಹಲವು ಬಾರಿ ದೂರು ನೀಡಿದರೂ ಆಡಳಿತ ಗಮನಕ್ಕೆ ತಂದರೂ ಕೂಡ ಯಾವುದೇ ಕೆಲಸವಾಗಿಲ್ಲ. ಹೀಗಾಗಿ ಕುಡಚಿ ಗ್ರಾಮದಲ್ಲಿ ಶಾಸಕ ಅನಿಲ್ ಬೆನಕೆ ಹಾಗೂ ಕಾಪೆರ್Çೀರೇಟರ್ ಬಸವರಾಜ್ ಮೊದಗೇಕರ ನೇತೃತ್ವದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ಮಳೆಗಾಲದಲ್ಲಿ ಬಳ್ಳಾರಿ ನಾಲಾ ಮೂಲಕ ನೀರು ಗದ್ದೆ, ಭತ್ತದ ಬೆಳೆ, ರಾಬಿ ಬೆಳೆ, ಜಾನುವಾರು ಮನೆಗಳಿಗೆ ನೀರು ನುಗ್ಗಿ ಹಾಳಾಗುತ್ತಿದೆ. ಈಗ ಸೇತುವೆ ನಿರ್ಮಾಣದಿಂದ ಗ್ರಾಮಸ್ಥರು ಸಂತೋಷಗೊಂಡಿದ್ದಾರೆ.

ಇಂದು ಕಾಪೆರ್Çರೇಟರ್‍ ಬಸವರಾಜ ಮೊದಗೇಕರ, ಪರಶುರಾಮ ಬೇಡ್ಕಾ, ಸುರೇಶ ಮುತಗೇಕರ, ಸುನೀಲ್ ಗಿರಿ, ರಾಜು ಮುತಗೇಕರ, ಭರತ್ ಬಾತ್ಕಾಂಡೆ, ಸಚಿನ್ ಕೋಳೇಕರ್ ಹಾಗೂ ಬಸವನ ಕುಡಚಿ ರೈತರು, ಗ್ರಾಮಸ್ಥರು ನಾಲೆಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಡಿದ ಗ್ರಾಮಸ್ಥರು, ಪ್ರತಿವರ್ಷ ಮಳೆಗಾಲದಲ್ಲಿ ಬಳ್ಳಾರಿ ನಾಲಾ ಮೂಲಕ ನೀರು ಹರಿದು ರೈತರ ಹೊಲಗಳಿಗೆ ನುಗ್ಗುತ್ತಿತ್ತು. ಹಾಗಾಗಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ರೈತರ ಬೆಳೆಗಳು ನಾಶವಾಗುತ್ತಿದ್ದವು. ಈ ಕುರಿತಂತೆ ಈ ಹಿಂದೆ ಹಲವಾರು ಬಾರಿ ಮನವಿ ಮಾಡಿದರೂ ಕೆಲಸವಾಗಿರಲಿಲ್ಲ. ಜನಪ್ರೀಯ ಶಾಸಕರಾದ ಅನೀಲ್ ಬೆನಕೆ ಹಾಗೂ ನಗರಸೇವಕರಾದ ಬಸವರಾಜ್ ಮೋದ್ಗೇಕರ್ ಪರಿಶ್ರಮದಿಂದಾಗಿ ಇಂದು ಈ ಕಾಮಗಾರಿ ನಡೆಯುತ್ತಿದೆ, ಇದರಿಂದ ರೈತರು ಹಾಗೂ ಕ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಇನ್ನು ಬಳ್ಳಾರಿ ನಾಲಾ ಕಾಮಗಾರಿಗೆ ಚಾಲನೆ ಸಿಕ್ಕಿದ್ದು ರೈತರು ಹಾಗೂ ಗ್ರಾಮಸ್ಥರ ಮುಖದಲ್ಲಿ ಸಂತಸ ತಂದಿದೆ. ಇನ್ನು ತಮ್ಮ ಕಷ್ಟಕ್ಕ ಸ್ಪಂಸಿದಿಸಿದ ಜನನಾಯಕರಿಗೆ ಜನತೆ ಧನ್ಯವಾದ ಹೇಳುತ್ತಿದ್ದಾರೆ.

Tags:

error: Content is protected !!