Belagavi

ಚಲಿಸುತ್ತಿರುವ ರೈಲಿಗೆ ತಲೆ ಕೊಟ್ಟು ಅಪರಿಚಿತ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣು..!

Share

ಬೆಳಗಾವಿ ರೈಲ್ವೆ ಪೊಲೀಸ್ ಠಾಣಾ ಸರಹದ್ದಿನ ಪಾಶ್ಚಾಪುರ-ಗೋಕಾಕ ರೋಡ್ ರೈಲು ನಿಲ್ದಾಣಗಳ ನಡುವೆ ಕಿ.ಮಿ ನಂ: 660/100-200 ರೈಲು ಹಳಿಯ ಮೇಲೆ ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ. ವಯಸ್ಸು ಅಂದಾಜು 50 ಎಂದು ಹೇಳಲಾಗಿದೆ. ಚಲಿಸುತ್ತಿದ್ದ ಗೂಡ್ಸ್ ರೈಲಿಗೆ ಬಿದ್ದು ಇಂದು ಶನಿವಾರ ದಿನಾಂಕ 5 ಫೆಬ್ರುವರಿ 2022 ರಂದು ಆತ್ಮ ಹತ್ಯೆಗೆ ಶರಣಾಗಿದ್ದಾನೆ. ಈ ಕುರಿತಂತೆ ಬೆಳಗಾವ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಮೃತ ವ್ಯಕ್ತಿ 50 ವರ್ಷದವರಾಗಿದ್ದು, 5ಅಡಿ 4ಅಂಗುಲ ಎತ್ತರವಾಗಿದ್ದಾರೆ. ಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದಾರೆ.
ಈ ವ್ಯಕ್ತಿಗಳ ರಕ್ತ ಸಂಬಂಧಿಗಳು ಯಾರಾದರೂ ಪತ್ತೆಯಾದರೆ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆ 0831-2405273, ಪಿಎಸ್‍ಐ 9480802127, ಹಾಗೂ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ 080-22871291ಗೆ ಸಂಪರ್ಕಿಸಲು ಕೋರಲಾಗಿದೆ.

Tags:

error: Content is protected !!