State

ಗಾನಕೋಗಿಲೆ ಲತಾ ಮಂಗೇಶ್ಕರ್ ನಮ್ಮ ಮನದಂಗಳದಲ್ಲಿ ಚಿರಸ್ಥಾಯಿ -ಸಿಎಂ ಬೊಮ್ಮಾಯಿ

Share

ಗಾನಕೋಗಿಲೆ ಲತಾ ಮಂಗೇಶ್ಕರ್ ಇಂದು ಗಾನವನ್ನು ಮುಗಿಸಿ ಮೌನವಾಗಿದ್ದಾರೆ. ಇದು ನಮ್ಮೆಲ್ಲರಿಗೆ ದು:ಖಕರ ಸಂಗತಿ. ಆದರೆ ಲತಾ ಮಂಗೇಶ್ಕರ್ ಅವರ ಹಾಡುಗಳ ಮೂಲಕ ನಮ್ಮೆಲ್ಲರ ಮಧ್ಯೆ ಸದಾ ನೆನಪಾಗಿರುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಇವತ್ತು ಹಾಡನ್ನು ನಿಲ್ಲಿಸಿದ್ದಾರೆ. ನಾವೆಲ್ಲ ನಮ್ಮ ಕಾಲದಲ್ಲಿ ಅವರ ಹಾಡುಗಳನ್ನು ಕೇಳಿಕೊಂಡು ಬೆಳೆದವರು. ಲತಾ ಮಂಗೇಶ್ಕರ್ ನಮ್ಮನ್ನು ಅಗಲಿರುವುದು ಬೇಸರದ ಸಂಗತಿ. ಇದರಿಂದ ಇಡೀ ಭಾರತ ದೇಶವೇ ದುಃಖದಲ್ಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಅವರ ಕುಟುಂಬಸ್ಥರಿಗೆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ. ಇನ್ನು ದೇಸದಲ್ಲಿ ಒದಲ್ಲ ಒಂದು ಕಡೆ ಲತಾ ಮಂಗೇಶ್ಕರ್ ನಮ್ಮ ಮನದಂಗಳದಲ್ಲಿ ಚಿರಸ್ಥಾಯಿಯಾಗಿರುತ್ತಾರೆ ಎಂದರು.

Tags:

error: Content is protected !!