ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು , ಖ್ಯಾತ ಪ್ರವಚನಕಾರರಾಗಿದ್ದ ಮಹಾಲಿಂಗಪೂರದ ಇಬ್ರಾಹಿಮ್ ಸುತಾರ ಅವರು ಇಂದು ಮುಂಜಾನೆ 6-30 ಕ್ಕೆ ತೀವ್ರ ಸ್ವರೂಪದ ಹೃದಯಾಘಾತದಿಂದ ನಿಧನರಾದರು.

ಹೌದು ಕನ್ನಡದ ಕಬೀರ ಎಂದೇ ಖ್ಯಾತಿ ಪಡೆದು ಹಿಂದೂ-ಮುಸ್ಲಿಂರ ನಡುವೆ ಭಾವೈಕ್ಯತೆಯ ಸಂದೇಶ ಸಾರಿದ್ದ ಇಬ್ರಾಹಿಂ ಸುತಾರ್ ಅವರು ಇನ್ನು ನೆನಪು ಮಾತ್ರ..ಇವರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ, ಅಭಿಮಾನಿ ವರ್ಗವನ್ನು ಅಗಲಿದ್ದಾರೆ. ಇಬ್ರಾಹಿಂ ಸುತಾರ್ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
