ಅನುಮಾನಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆಯುವ ಸುದ್ದಿಯನ್ನು ನಾವು ನೀವೆಲ್ಲಾ ಕೇಳಿದ್ದೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಅನುಮಾನಸ್ಪದವಾಗಿ ಓಡಾಡುತ್ತಿದ್ದ ಕೋಳಿಯನ್ನೇ ಅಮೆರಿಕ ರಕ್ಷಣಾ ಇಲಾಖೆ ವಶಕ್ಕೆ ಪಡೆದಿದ್ದಾರೆ.

ಹೌದು ಅಮೆರಿಕದ ಸೇನಾ ಕಚೇರಿ ಇರುವ ಪೆಂಟಗನ್ ಭದ್ರತಾ ಏರಿಯಾ ಸುತ್ತ ಕೋಳಿ ಅನುಮಾನಸ್ಪದವಾಗಿ ಓಡಾಡುತ್ತಿತ್ತು. ಈ ವೇಳೆ ಅನುಮಾನಗೊಂಡ ರಕ್ಷಣಾ ಸಿಬ್ಬಂದಿ ಕೋಳಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಮೆರಿಕ ಪ್ರಾಣಿ ದಯಾ ಸಂಘವೊಂದು ಮಾಹಿತಿ ನೀಡಿದೆ.
ಇನ್ನು ಕೋಳಿಗೆ ಹೆನ್ನಿ-ಪೆನ್ನಿ ಎಂದು ಹೆಸರಿಡಲಾಗಿದೆ. ಸದ್ಯ ಕೋಳಿಯನ್ನು ವರ್ಜೀನಿಯಾದಲ್ಲಿ ಕೋಳಿ ಫಾರ್ಮ್ ಹೊಂದಿರುವ ವ್ಯಕ್ತಿಯೊಬ್ಬರು ತೆಗೆದುಕೊಂಡು ಹೋಗಿದ್ದಾರೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
