Vijaypura

ಕಿತ್ತೂರು ರಾಣಿ ಚೆನ್ನಮ್ಮಳ ವಿಜಯಗಾಥೆಗೆ ಸಖತ್ ಸ್ಟೆಪ್ ಹಾಕಿ ಎ.ಆರ್.ಜೆ.ಶಾಲೆಯ 120 ವಿದ್ಯಾರ್ಥಿಗಳು

Share

ಕಿತ್ತೂರು ರಾಣಿ ಚೆನ್ನಮ್ಮ ಎಂದ್ರೆ ಎಂಥವರಿಗೂ ದೇಶಪ್ರೇಮ ಉಕ್ಕಿಬರುತ್ತೆ. ಅಂದು ಬ್ರಿಟಿಷರ ವಿರುದ್ದ ಹೋರಾಡಿ ವಿಜಯಿಯಾಗಿದ್ದು ರಾಣಿ ಚೆನ್ನಮ್ಮ. ರಾಣಿ ಚೆನ್ನಮ್ಮಳ ವಿಜಯಗಾಥೆ ಕುರಿತು ಹಲವು ಚಿತ್ರಗಳು ಬಂದು ಹೋಗಿವೆ. ಕಳೆದ ವರ್ಷಗಳ ಇಚೆಗೆ ಅಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ ನಟಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ಜನಮನಸೊರೆ ಗೊಂಡಿತ್ತು. ಇದೇ ಚಿತ್ರದ ಹಾಡು ಬಳಸಿಕೊಂಡು ಗುಮ್ಮಟನಗರಿ ಶಾಲೆಯೊಂದರಲ್ಲಿ ನೃತ್ಯ ರೂಪಕಕ್ಕೆ ವಿದ್ಯಾರ್ಥಿಗಳು ಹೆಜ್ಹೆ ಹಾಕಿ, ನೆರೆದವರಲ್ಲಿ ದೇಶಭಕ್ತಿ ಉಕ್ಕಿ ಹರಿಯುವಂತೆ ಮಾಡಿದರು. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಇಡೀ ದೇಶವನ್ನೇ ಆಕ್ರಮಿಸಿಕೊಂಡಿದ್ದ ಬ್ರಿಟಿಷರನ್ನೇ ನಡುಗಿಸಿದ್ದು ವೀರ ರಾಣಿ ಚೆನ್ನಮ್ಮ. ತನ್ನ ಪುಟ್ಟ ರಾಜ್ಯ ಕಿತ್ತೂರಿನ ರಕ್ಷಣೆಗಾಗಿ ಹೋರಾಡಿ ವಿಶ್ವ ವಿಖ್ಯಾತಿಯಾದಳು. ಚೆನ್ನಮ್ಮಳ ಧೀರತೆಯ ಕಥೆಯನ್ನು ಸ್ಫೂರ್ತಿದಾಯಕವಾಗುವಂತೆ ನೃತ್ಯ ರೂಪಕದಲ್ಲಿ ಗುಮ್ಮಟನಗರಿ ವಿಜಯಪುರದ ಎ.ಆರ್.ಜೆ.ಇಂಟರ್ನ್ಯಾಷನಲ್ ಫ್ಯೂಚರಿಸ್ಟಿಕ್ ಶಾಲೆಯ 120 ವಿದ್ಯಾರ್ಥಿಗಳ ನೃತ್ಯ ರೂಪಕ ಪಾಲಕರು ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಶಾಲೆಗಳಲ್ಲಿ ಸ್ಪೋರ್ಟ್ಸ್ ಮೀಟ್ ಸಲುವಾಗಿ ಈ ನೃತ್ಯ ರೂಪಕ ಪ್ರದರ್ಶಿಸಲಾಯಿತು. ಕಪ್ಪ.. ಕಪ್ಪ… ಕಪ್ಪ ಯಾರನ್ನು ಕೇಳುತ್ತಿದ್ದೀ ಕಪ್ಪ ಕೊಡಲು! ಯಾತಕ್ಕೆ ಕೇಳುತ್ತಿ? ಮೋಡ ಮಳೆ ಸುರಿಸುತ್ತದೆ, ಭೂಮಿ ಬೆಳೆಯುತ್ತದೆ, ನಿನಗೇಕೆ ಕೊಡಬೇಕು ಕಪ್ಪ? ನೀವೇನು ನೆಂಟರೆ, ಸೋದರರೇ, ದಾಯಾದಿಗಳೇ? ನಿಮಗೇಕೆ ಕೊಡಬೇಕು ಕಪ್ಪ? ನೀವೇನು ಉತ್ತಿರಾ, ಬಿತ್ತಿರಾ, ಬೆಳೆದಿರಾ, ನೀರು ಹಾಯಿಸಿ ಕಳೆಕಿತ್ತಿರಾ? ನಿಮಗೇಕೆ ಕೊಡಬೇಕು ಕಪ್ಪ..!?’ ಎನ್ನುವ ರಾಣಿ ಚೆನ್ನಮ್ಮಳ ಘರ್ಜನೆಗೆ ಪಾತ್ರಧಾರಿಗಳ ಅಭಿನಯಕ್ಕೆ ಪ್ರೇಕ್ಷಕರಿಂದ ನಿರಂತರವಾಗಿ ಚಪ್ಪಾಳೆ ಗಿಟ್ಟಿಸುತ್ತ ಸಾಗಿತ್ತು. ಸುಮಾರು 36 ನಿಮಿಷಗಳ ಈ ನೃತ್ಯ ರೂಪಕದಲ್ಲಿ ವಿದ್ಯಾರ್ಥಿಗಳು ಪಾತ್ರದಲ್ಲಿ ತಲ್ಲೀಣರಾಗಿ ಭಾಗವಹಿಸಿದ್ದರು.

ಕಿತ್ತೂರು ರಾಣಿ ಚೆನ್ನಮ್ಮಳ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ಪಾತ್ರದಾರಿ ವಿದ್ಯಾರ್ಥಿಯ ಅಮೋಘ ಅಭಿನಯ ಸಹ ಪ್ರೇಕ್ಷಕರ ಚಪ್ಪಾಳೆಗೆ ಪಾತ್ರವಾಯಿತು. 120 ವಿದ್ಯಾರ್ಥಿಗಳು ಸೈನಿಕರು, ಬ್ರಿಟಿಷ್ ಅಧಿಕಾರಿಗಳು, ಬ್ರಿಟಿಷ್ ಸೈನಿಕರು ಹಾಗೂ ಕಿತ್ತೂರು ಸಂಸ್ಥಾನದ ನಾಗರಿಕರಾಗಿ ಕಾಣಿಸಿಕೊಂಡರು. ವೀರಾವೇಷದಿಂದ ಹೊರಾಡುವ ದೃಶ್ಯ ಮನೋಹರವಾಗಿತ್ತು. ಪ್ರತಿ ನಿಮಿಷಕ್ಕೆ ಬದಲಾಗುತ್ತಿದ್ದ ಸನ್ನಿವೇಶಕ್ಕೆ ಪಾತ್ರಧಾರಿ ವಿದ್ಯಾರ್ಥಿಗಳು ಸಖತ್ ಸ್ಟೆಪ್ ಹಾಕಿ ನಯನ ಮನೋಹರ ದೃಶ್ಯವನ್ನು ಸೃಷ್ಟಿಸಿದರು. ಬ್ರಿಟಿಷ್ ವಿರುದ್ದ ಹೊರಾಡಿ ಜಯ ಸಾಧನೆ ಬಳಿಕ ರಾಣಿ ಚೆನ್ನಮ್ಮಳು ಕುದುರೆ ಮೇಲೆ ಏರಿ ಬರೊ ದೃಶ್ಯವಂತೂ ನೆರೆದವರ ಕೈಗಳಿಂದ ಚಪ್ಪಾಳೆ ಹೊಡೆಯುವಂತೆ ಪ್ರೇರೇಪಿಸಿತು. ಇನ್ನೂ ಈ ನೃತ್ಯ ರೂಪಕಕ್ಕೆ ಶಾಲೆಯ ಚೇರ್ಮನ್ ಪ್ರದೀಪ ಜೈನ್ ಬೇಕಾದ ಸಕಲ ವ್ಯವಸ್ಥೆ ಮಾಡಿದ್ದರು. ಶಾಲೆಯ ನೃತ್ಯ ಶಿಕ್ಷಕ ಸಾಗರ ಈ ನೃತ್ಯ ಸಂಯೋಜಿಸಿದ್ದರು. ‌ಇನ್ನೂ ಈ ನೃತ್ಯ ಪಾಲಕರ ಮೆಚ್ಚುಗೆ ಗಳಿಸಿತು.

ಒಟ್ನಲ್ಲಿ ಗುಮ್ಮಟನಗರಿಯ ಅಂತರರಾಷ್ಟ್ರೀಯ ಮಟ್ಟದ ಶಾಲೆಯಾಗಿರುವ ಎ.ಆರ್.ಜೆ. ಶಾಲೆಯಲ್ಲಿ ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಇತಿಹಾಸವನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರ ಮನ ಗೆದ್ದಿತಲ್ಲದೇ ಶಾಲೆಯ ಆಡಳಿತ ಮಂಡಳಿಯ ಕಾರ್ಯಕ್ಕೆ ಶ್ಲಾಘನೆಯೂ ವ್ಯಕ್ತವಾಗಿದೆ.

Tags:

error: Content is protected !!