ಬಪ್ಪಿ ಲಹಿರಿ ಇಂದು ನಮ್ಮೊಂದಿಗಿಲ್ಲ. ಆದರೇ ಅವರು ಸಂಯೋಜಿಸಿದ ಅವರು ಹಾಡಿದ ಗೀತೆಗಳು ಯಾವತ್ತೂ ಅಜರಾಮರ. ಬಪ್ಪಿ ಲಹಿರಿ ಅವರು ಕೇವಲ ಹಿಂದಿ, ಬಂಗಾಳಿ, ಅಷ್ಟೇ ಅಲ್ಲದೇ ಕನ್ನಡದಲ್ಲಿಯೂ ಸಂಗೀತ ಸಂಯೋಜನೆ ಮಾಡಿದ್ದಾರೆ.

ಕನ್ನಡದ ನಟ-ನಿರ್ದೇಶಕ ದ್ವಾರಕೀಶ್ ನಿರ್ಮಿಸಿ, ನಿರ್ದೇಶಿಸಿದ್ದ ‘ಆಫ್ರಿಕಾದಲ್ಲಿ ಶೀಲಾ’ ಚಿತ್ರಕ್ಕೆ ಬಪ್ಪಿ ಲಹಿರಿ ಸಂಗೀತ ನೀಡಿದ್ದರು. ೧೯೮೬ರಲ್ಲಿ ತೆರೆಕಂಡ ಆ ಸಿನಿಮಾದ ಮೂಲಕ ಮೊದಲ ಬಾರಿಗೆ ಅವರು ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ವಿಷ್ಣುವರ್ಧನ್ ಅವರ ‘ಕೃಷ್ಣ ನೀ ಬೇಗನೇ ಬಾರೋ’, ‘ಪೊಲೀಸ್ ಮತ್ತು ದಾದಾ’, ಅಂಬರೀಷ್ ನಟಿಸಿದ್ದ ‘ಗುರು’ ಸಿನಿಮಾಗಳಿಗೆ ಸಂಗೀತ ನೀಡಿದ್ದರು. ಸತೀಶ್ ನೀನಾಸಂ ಹೀರೋ ಆಗಿದ್ದ ‘ಲವ್ ಇನ್ ಮಂಡ್ಯ’ ಚಿತ್ರದ ‘ಕರೆಂಟ್ ಹೋದ ಟೈಮಲಿ..’ ಹಾಡನ್ನು ಬಪ್ಪಿ ಹಾಡಿದ್ದರು. ಇಂದು ಅವರು ನೆನಪು ಮಾತ್ರ ಆದರೇ ಅವರು ಹಾಡಿದ ಹಾಡು ಮತ್ತು ಸಂಗೀತ ಸಂಯೋಜನೆ ಎಂದೆAದಿಗೂ ಅಜರಾಮರ.