ಆತ ಈಗಾಗಲೇ ಮದಯವೆಯಾಗಿ ಎರಡು ಮಕ್ಕಳ ತಂದೆ. ಆಕೆಗೆ ಇದು ಹೊಸ ಮದುವೆ. ಅದರಲ್ಲೂ ಬಿಕಾಂ ಡಿಗ್ರಿ ಹೋಲ್ಡರ್. ಅವರಿಬ್ಬರ ಮದ್ಯೆ ಪ್ರೇಮಾಂಕುರ ವಾಗಿದೆ. ತಮಗೆ ರಕ್ಷಣೆ ಕೋರಿ ಎಸ್ ಪಿ ಮೊರೆ ಹೋಗಿದ್ದ ಜೋಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ವಿಚಿತ್ರ ಪ್ರೇಮ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್ …

ಹೀಗೆ ಒಬ್ಬರ ಕೈ ಒಬ್ಬರು ಹಿಡಿದು ಹೊಗ್ತಿರೋ ಜೋಡಿ ಹೆಸರು
ಹೆಸರು ಸೋಮನಿಂಗ ಹಾಗೂ ಅಕ್ಷತಾ. ಇವರಿಬ್ಬರೂ ವಿಜಯಪುರ ತಾಲೂಕಿನ ಜಾಲಗೇರಿ ಗ್ರಾಮ ದವರು. ಇವರ ಲವ್ ಕಹಾನಿ ಒಂಥರಾ ವಿಚಿತ್ರವಾಗಿದೆ. ಡ್ರೈವರ್ ಆಗಿರೋ ಸೋಮಲಿಂಗ ಬಿಕಾಂ ಓದಿರೋ ಅಕ್ಷತಾಳ ಲವ್ ಸ್ಟೋರಿ ಗೆ ಇದು ಲವ್ ಅನ್ಬೇಕೋ, ಕ್ರಷ್ ಅನ್ಬೇಕೋ ಗೊತ್ತಾಗ್ತಿಲ್ಲ. ಸೋಮಲಿಂಗನಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.
ಈ ವಿಷಯ ಅಕ್ಷತಾಳಿಗೆ ಗೊತ್ತಿದ್ರೂ ಪ್ರೀತಿಸಿ, ಮದುವೆಯಾಗಿದ್ದಾಳೆ. ಸೋಮನಿಂಗ ಮೊದಲು ಅಕ್ಷತಾಳ ಮನೆಯಲ್ಲಿ ಕಾರು ಡ್ರೈವರ್ ಆಗಿದ್ನಂತೆ. ಈ ವೇಳೆ ಅಕ್ಷತಾಳನ್ನು ವಿಜಯಪುರಕ್ಕೆ ಕಾಲೇಜಿಗೆ ಬಿಡಲೆಂದು ಪೋಷಕರು ಬೈಕ್ ಮೇಲೆ ಕಳುಸ್ತಿದ್ದರು. ಈ ವೇಳೆ ಇಬ್ಬರು ಮಧ್ಯೆ ಪ್ರೇಮಾಂಕುರ ವಾಗಿದೆ. ಮದುವೆಯಾಗಿದ್ದರು ಸೋಮನಿಂಗ ಯುವತಿ ಅಕ್ಷತಾಳ ಜೊತೆ ಲವ್ವಿ ಡವ್ವಿ ಇಟ್ಟುಕೊಂಡಿ ದ್ದಾನೆ. ಇಬ್ಬರು ಆರು ವರ್ಷ ಲವ್ ಮಾಡಿ, ಕಳೆದ ವರ್ಷ ನವೆಂಬರ್ 9ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಯುವತಿಯನ್ನು ಬೈಕ್ ಮೇಲೆ ಸೋಮನಿಂಗನ ಜೊತೆ ಕಾಲೇಜಿಗೆ ಕಳುಹಿಸಿದ್ದೇ ತಪ್ಪಾಯ್ತಾ ಅನ್ನುವಂತಾಗಿದೆ. ಪ್ರೀತಿ ಹೇಗೆ ಯಾರು ಮೇಲೆ ಹುಟ್ಟುತ್ತೇ ಅಂತ ಗೊತ್ತಿಲ್ಲ, ಸೋಮನಿಂಗನನ್ನು ಪ್ರೀತಿಸಿ ಮದುವೆಯಾಗಿದ್ದೇನೆ. ಎರಡು ಮದುವೆಯಾದರೆ ತಪ್ಪೇನು, ಸೋಮನಿಂಗನ ಮೊದಲ ಪತ್ನಿ ಜೊತೆ ಅಡ್ಜೆಸ್ಟ್ ಆಗಿ ಹೋಗ್ತೀನಿ, ನಮಗೂ ಜೀವಿಸಲು ಬಿಡಿ ಅಂತಿದ್ದಾಳೆ.
ಇನ್ನೂ ಪ್ರತಿ ಲವ್ ಸ್ಟೋರಿಗೆ ಇರೋ ಹಾಗೆ ಇವರಿಬ್ಬರ ಲವ್ , ಮ್ಯಾರೇಜ್ ಗೆ ಸಹಜವಾಗಿಯೇ ಇಬ್ಬರ ಕುಟುಂಬದವರು ವಿರೋಧಿಸಿದ್ದಾರೆ. ಅಕ್ಷತಾ ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳಂತೆ. ಸೋಮನಿಂಗನೇ ಬೇಕು ಅಂತ ಆತನನ್ನೇ ಪ್ರೀತಿಸಿದ್ದೀನಿ ಕೇಳಿದ್ದ ಪೋಷಕರಿಗೆ ಹೇಳಿದ್ದಾಳೆ. ರಿಜಿಸ್ಟರ್ ಮ್ಯಾರೇಜ್ ಆಗಿ ಇಬ್ಬರು ಗೋವಾ ಸೇರಿದಂತೆ ಹೊರ ರಾಜ್ಯದಲ್ಲಿ ಸುತ್ತಾಡಿ ಬಂದಿದ್ದಾರೆ. ಪೋಷಕರು ಕಾಣೆ ಕೇಸ್ ದಾಖಲಿಸಿದ್ದ ಹಿನ್ನೆಲೆಯಲ್ಲಿ ಜೀವ ಬೆದರಿಕೆಯಿದೆ ರಕ್ಷಣೆ ಕೊಡಿ ಅಂತ ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದ ಜೋಡಿಯನ್ನು ವಶಕ್ಕೆ ಪಡೆದು ಆಟೋದಲ್ಲಿ ತಿಕೋಟಾ ಪೊಲೀಸ್ ಠಾಣೆಗೆ ಕರೆದೊಯ್ದರು. ಇನ್ನು ಸೋಮನಿಂಗ ಮೊದಲ ಹೆಂಡತಿಗೆ ಡೈವೋರ್ಸ್ ಕೂಡಾ ಕೊಟ್ಟಿಲ್ಲ. ಆದ್ರೆ ನನಗೆ ಇಬ್ಬರು ಹೆಂಡತಿಯರು ಇರಲಿ. ನನ್ನ ಮೊದಲ ಹೆಂಡ್ತಿಯನ್ನು ಮನವೊಲಿಸ್ತಿನಿ ಅಂತಿದ್ದಾನೆ. ಮೊದಲ ಹೆಂಡ್ತಿ, ಇಬ್ಬರೂ ಮಕ್ಕಳು ಇವರಿಬ್ಬರ ಲವ್ ಮ್ಯಾರೇಜ್ ಗೆ ಒಪ್ಪಿಕೊಳ್ಳೋದು ಕಷ್ಟ. ಆದ್ರೆ ಏನೋ ಅರಿಯದ ವಯಸ್ಸಿನಲ್ಲಿ ಪ್ರೀತಿಯ ಮೋಹಕ್ಕೆ ಯುವತಿ ಬಿದ್ದಿದ್ದಾಳಾ ಅನ್ನೋ ಮಾತು ಪ್ರೇಮ ಪ್ರಕರಣ ನೋಡಿ ಜನ ಮಾತನಾಡು ವಂತಾಗಿದೆ. ಇವರಿಬ್ಬರು ವಿಜಯಪುರ ವಿವಾಹ ನೊಂದಣಿ ಕಚೇರಿಯಲ್ಲಿ ವಿವಾಹ ನೊಂದಾಯಿಸಿದ್ದು, ಸೋಮಲಿಂಗ ಮೊದಲ ವಿವಾಹದ ಬಗ್ಗೆ ಮರೆಮಾಚಿ ನೊಂದಣಿ ಮಾಡಿಸಿ ಕೊಂಡಿದ್ದಾರೆ ಎನ್ನಲಾಗ್ತಿದೆ. ಅಕ್ಷತಾ ಕುಟುಂಬಸ್ಥರಿಂದ ಬೆದರಿಕೆ ಕರೆ ಬರ್ತಿವಿಯಂತೆ. ನಮಗೆ ರಕ್ಷಣೆ ಕೊಡಿ ಅಂತ ಎಸ್ಪಿ ಯವರಲ್ಲಿ ಮನವಿ ಮಾಡ್ತಿದ್ದಾರೆ.
.
ಒಟ್ಟಿನಲ್ಲಿ ಪ್ರೀತಿ ಮಾಯೆ ಹುಷಾರು, ಎನ್ನೊ ಹಾಡು ಇವರಂತರವನ್ನು ನೋಡಿಯೇ ಬರೆದಿರಬಹುದು. ವಿಚಿತ್ರವಾಗಿರುವ ಲವ್ ಸ್ಟೋರಿ ಯನ್ನು ಪೊಲೀಸರು ಅದೇಗೆ ಬಗೆಹರಿಸ್ತಾರೊ? ಈ ಪ್ರೇಮ ಪ್ರಕರಣ ಮುಂದೇನಾಗುತ್ತೆ ಅನ್ನೋದು ಕಾದು ನೋಡಬೇಕಿದೆ…
