ರಾಜ್ಯ ಹಾಗೂ ರಾಷ್ಟ್ರ ಮತ್ತುರಾಜ್ಯ ಸಹಕಾರಿರತ್ನ ಪ್ರಶಸ್ತಿ ವಿಜೇತ ಖಾದಿ ಕಾಯಕಯೋಗಿ ಹಿರಿಯ ಸ್ವಾತಂತ್ರ್ಯಯೋಧಗಾಂಧಿವಾದಿ ಶತಾಯುಷಿ ಗಂಗಪ್ಪ ಮಾಳಗಿ ಅವರ 100ನೇ ಹುಟ್ಟು ಹಬ್ಬದ ಸಂಭ್ರಮಾಚರಣೆಉತ್ಸಾಹದಲ್ಲಿ ನೆರವೇರಿತು.

ಬೆಳಗಾವಿ ತಾಲೂಕಿನಗಾಂಧಿ ಖಾದಿ ಗ್ರಾಮ ಹುದಲಿಯಲ್ಲಿಹಿರಿಯ ಸ್ವಾತಂತ್ರ್ಯಯೋಧಗಾಂಧಿವಾದಿ ಶತಾಯುಷಿ ಗಂಗಪ್ಪ ಮಾಳಗಿ ಅವರ 100ನೇ ಹುಟ್ಟು ಹಬ್ಬವನ್ನುಉತ್ಸಾಹದಿಂದಆಚರಿಸಲಾಯಿತು.ಗ್ರಾಮಸ್ಥರು.ಗ್ರಾಮ ಪಂಚಾಯತನ ಸದಸ್ಯರು , ವಿವಿಧ ಸಂಘ-ಸಂಸ್ಥೆಗಳು, ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳು ಗಂಗಪ್ಪ ಮಾಳಗಿ ಅವರನ್ನ ಸತ್ಕರಿಸಿ ಜನ್ಮದಿನದ ಶುಭಾಷಯಗಳನ್ನ ತಿಳಿಸಿದರು.
ಈ ವೇಳೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರಿಧುರೀಣ ಬಾಳಗೌಡ ಪಾಟೀಲ ಅವರುಗಂಗಪ್ಪ ಮಾಳಗಿ ತಮ್ಮ ಹತ್ತನೇ ವಯಸ್ಸಿನಿಂದಲೇ ಖಾದಿ ಧರಿಸಿ ರಾಷ್ಟ್ರಭಕ್ತರೆನಿಸಿಕೊಂಡರು.1937ರಲ್ಲಿ ಮಹಾತ್ಮಾಗಾಂಧಿಜೀ ಹುದಲಿಗೆ ಆಗಮಿಸಿ 7 ದಿನ ವಾಸ್ತವ್ಯ ಮಾಡಿದ್ದರು.ಆ ಸಂದರ್ಭದಲ್ಲಿಗಂಗಪ್ಪ ಮಾಳಗಿ ಅವರಕುಠೀರದ ಸ್ವಯಂ ಸೇವಕರಾಗಿದ್ದರು.ನೂಲಿನಲ್ಲಿ ಹಂಜಿಯನ್ನ ತಯಾರಿಸಿ ವಾರವಿಡಿದುಡಿದುಅವರ ಪ್ರೀತಿಗೆ ಪಾತ್ರರಾದರು.ಇವರಕಾರ್ಯವನ್ನ ಮೆಚ್ಚಿ ಮಹಾತ್ಮಾಗಾಂಧಿಜೀಗಂಗಪ್ಪ ಮಾಳಗಿ ಅವರಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಿದ್ದರು.ಇಂತರ ವ್ಯಕ್ತಿಗಳು ಇಂದಿನ ಯುವಪೀಳಿಗೆಗೆ ದಾರಿ ದೀಪವೆಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ಧ ಮಾಜಿ ಶಾಸಕ ಎಸ್‍ಸಿ ಮಾಳಗಿಯವರು ಈ ವೇಳೆ ಮಾತನಾಡಿ 1942ರಲ್ಲಿ ನಡೆದ ಚಲೇ ಜಾವ್ ಚಳುವಳಿಯಲ್ಲಿ ಭಾಗವಹಿಸಿ ಹಿಂಡಲಗಾಜೈಲಿನಲ್ಲಿ ಶಿಕ್ಷೆ ಅನುಭವಿಸಿದರು.1954ನೇ ಸಾಲಿನಲ್ಲಿ ಖಾದಿ ಗ್ರಾಮೋದ್ಯೋಗ ಸಹಕಾರಿ ಸಂಘವನ್ನ ಸ್ಥಾಪಿಸಿದ ಸಂಘದ ಬೆಳವಣಿಗೆಗೆ ಪಾತ್ರಧಾರಿಯಾಗಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.ಇವರ ನಿಸ್ವಾರ್ಥ ಸೇವೆಗೆ ರಾಜ್ಯ ಮತ್ತುರಾಷ್ಟ್ರ ಪ್ರಶಸ್ತಿ ಒಲಿದು ಬಂದಿದೆ.ರಾಜ್ಯ ಸರ್ಕಾರವು ಸಹಕಾರರತ್ನ ಪುರಸ್ಕಾರ ನೀಡಿಇವರನ್ನ ಗೌರವಿಸಿದೆ ಎಂದರು.
ಈ ವೇಳೆ ಅಡಿವೆಪ್ಪ ಮಾಳಗಿ, ಚನ್ನಬಸು ಮಾಳಗಿ, ಚಂದ್ರುಕುಂದರಗಿ, ಚನ್ನಬಸು ಪವಾಡಿ, ಅಜ್ಜಪ್ಪ ಮಳಗಲಿ, ಶಂಕರ ಜಮನಾಳಿ, ಅಶೋಕ ನೇಸರಗಿ, ಅಶೋಕ ಬಡಿಗೇರ, ರಾಜು ಮಾಳಗಿ, ಮೋಹನ ಖನಗಣಿ, ಡಾ. ಶಿವನಗೌಡ ಪಾಟೀಲ, ಶಿವಾನಂದ ನಿರ್ವಾಣಿ, ವಿ.ಎ.ಬಲಕುಂದಿ ಇನ್ನುಳಿದವರು ಭಾಗಿಯಾಗಿದ್ಧರು.