ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ಖಂಡಿಸಿ ವಿಜಯಪುರದ ಕೋರ್ಟ್ ಸರ್ಕಲ್ ಹತ್ತಿರ ಇರುವ ಬಿಜೆಪಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿ, ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.

ಕೇಸರಿ ಧ್ವಜ ರಾಷ್ಟ್ರೀಯ ಧ್ವಜವನ್ನು ಮಾಡುತ್ತೇವೆ ಎಂದು ಹೇಳಿಕೆ ನೀಡಿದ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಅಲ್ಲದೇ, ಭವಿಷ್ಯದಲ್ಲಿ ಕೇಸರಿ ಧ್ವಜ ರಾಷ್ಟ್ರೀಯ ಧ್ವಜ ಆಗುತ್ತದೆ. ಅಲ್ಲದೇ, ಕೆಂಪು ಕೋಟೆಯ ಮೇಲೆ ಹಾಡುತ್ತದೆ ಎಂದಿರುವುದು ಖಂಡನೀಯ. ಸಚಿವ ರಾಜಕೀಯ ಮಾಡುವುದು ಬಿಡಬೇಕು. ಅಲ್ಲದೇ, ಸಚಿವ ಕೆಎಸ್ಈ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
