Banglore

ಈಶ್ವರಪ್ಪ ವಿರುದ್ಧ ಮುಂದುವರಿದ ಕಾಂಗ್ರೆಸ್ ಸಮರ: ಗದ್ದಲ ಹೆಚ್ಚಾಗ್ತಿದ್ದಂತೆ ನಾಳೆಗೆ ಕಲಾಪ ಮುಂದೂಡಿದ ಸ್ಪೀಕರ್

Share

ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಗುರುವಾರವೂ ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕರು ಗದ್ದಲು ಆರಂಭಿಸಿದರು. ಸ್ಪೀಕರ್ ಕಾಗೇರಿ ಎಷ್ಟೇ ಮನವಿ ಮಾಡಿಕೊಂಡರು ಕಾಂಗ್ರೆಸ್ ಸದಸ್ಯರು ಕ್ಯಾರೆ ಎನ್ನದ ಹಿನ್ನೆಲೆ ನಾಳೆ ಶುಕ್ರವಾರಕ್ಕೆ ಸದನವನ್ನು ಸ್ಪೀಕರ್ ಮುಂದೂಡಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ನೀಡಿರುವ ಕೇಸರಿ ಧ್ವಜಕ್ಕೆ ಸಂಬಂಧಿಸಿದ ಹೇಳಿಕೆ ವಿರುದ್ಧ ವಿಧಾನಸಭೆಯಲ್ಲಿ ಕಾಂಗ್ರೆಸ್ ಕಲಿಗಳು ಸಮರ ಸಾರಿದ್ದಾರೆ. ನಿನ್ನೆಯೂ ಕೂಡ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯ ಜಂಗಿಕುಸ್ತಿಯಾಗಿತ್ತು. ರಾಷ್ಟ್ರಧ್ವಜ ಹಿಡಿದುಕೊಂಡೇ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದ್ದರು. ಅದರಲ್ಲಿಯೂ ಈಶ್ವರಪ್ಪ ಮತ್ತು ಡಿ.ಕೆ.ಶಿವಕುಮಾರ್ ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪ ಕಲಾಪ ಆಹುತಿಯಾಗಿತ್ತು. ಇಂದು ಕೂಡ ಕಲಾಪ ಆರಂಭವಾಗುತ್ತಿದ್ದಂತೆ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದ ಭಾವಿಗಿಳಿದು ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದರು. ಈ ವೇಳೆ ಸ್ಪೀಕರ್ ಕಾಗೇರಿ ಅವರು ಪ್ರತಿಭಟನೆ ಕೈ ಬಿಟ್ಟು ಪ್ರಶ್ನೋತ್ತರ ಕಲಾಪದಲ್ಲಿ ಭಾಗಿಯುವಂತೆ ಮನವಿ ಮಾಡಿಕೊಂಡರೂ ಕೂಡ ವಿಪಕ್ಷ ಸದಸ್ಯರು ತಮ್ಮ ಪಟ್ಟು ಸಡಿಸಲಿಲ್ಲ. ಸದನದಲ್ಲಿ ಕಾಂಗ್ರೆಸ್ ಗದ್ದಲ ಹೆಚ್ಚಾಗುತ್ತಿದ್ದಂತೆ ಕಲಾಪವನ್ನು ಸ್ಪೀಕರ್ ಮುಂದೂಡಿದರು.

ಬಳಿಕ ಮತ್ತೆ ಕಲಾಪ ಆರಂಭವಾದರೂ ಕೂಡ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮುಂದುವರಿಸಿದರೂ ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಸದಸ್ಯರನ್ನು ಸ್ಪೀಕರ್ ಕಾಗೇರಿ ಅವರು ಅದೆಷ್ಟೇ ಮನವಲಿಸಲು ಪ್ರಯತ್ನಿಸಿದರೂ ಕೂಡ ಫಲಶೃತಿ ಆಗಲಿಲ್ಲ. ರಾಷ್ಟ್ರಧ್ವಜಕ್ಕೆ ಅವಮಾನವಾಗುವ ಹೇಳಿಕೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ ಮೊದಲು ರಾಜೀನಾಮೆ ನೀಡಬೇಕು. ಅನಂತರವೇ ನಾನು ಸದನದಲ್ಲಿ ಮಾತನಾಡುತ್ತೇನೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪವನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಸ್ಪೀಕರ್ ಕಾಗೇರಿ ಮುಂದೂಡಿದರು.

ಇನ್ನು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಲು ಕಾಂಗ್ರೆಸ್ ಶಾಸಕರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿಗೆ ವ್ಯವಸ್ಥೆ ಕಲ್ಪಿಸುವಂತೆ ವಿಧಾನಸಭೆ ಕಾರ್ಯದರ್ಶಿಗೆ ವಿಪಕ್ಷ ನಾಯಕರು ಮನವಿ ಮಾಡಿದರು. ರಾತ್ರಿಗೆ ಸಸ್ಯಾಹಾರಿ ಊಟ, ಹಾಸಿಗೆ, ಟೀ-ಕಾಫಿ ವ್ಯವಸ್ಥೆ ಮಾಡಬೇಕು ಎಂದು ಕೋರಿದರು. ಕಲಾಪವನ್ನು ಸ್ಪೀಕರ್ ಮುಂದೂಡಿದರೂ ಬಹುತೇಕ ಕಾಂಗ್ರೆಸ್ ಶಾಸಕರು ಇನ್ನೂ ಸದನದಲ್ಲಿಯೇ ಇದ್ದರು. ಪ್ರತಿಪಕ್ಷ ಸದಸ್ಯರ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿದರು.

Tags:

error: Content is protected !!