Banglore

ಈಶ್ವರಪ್ಪ ಒಬ್ಬ ಬಚ್ಚಲುಬಾಯಿ ವ್ಯಕ್ತಿ, ದೇಶದ್ರೋಹಿ: ಡಿಕೆಶಿ ಕಿಡಿ..!

Share

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಹರಿಹಾಯ್ದಿದ್ದಾರೆ. ಈಶ್ವರಪ್ಪ ಒಬ್ಬ ಬಚ್ಚಲು ಬಾಯಿ ನಾಯಕ, ದೇಶದ್ರೋಹಿ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಕುರಿತಂತೆ ವಾಗ್ದಾಳಿ ನಡೆಸಿದರು. ಈಶ್ವರಪ್ಪ ಒಬ್ಬ ಬಚ್ಚಲು ಬಾಯಿ ನಾಯಕ ದೇಶದ್ರೋಹಿ ಎಂದು ಅವರೇ ಒಪ್ಪಿಕೊಂಡಿದ್ದಾರೆ. ದೆಹಲಿ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ, ಈ ಕುರಿತು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಬಿಜೆಪಿಯವರು ಈಶ್ವರಪ್ಪ ಕಾರ್ಯವನ್ನ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇಡೀ ಪಕ್ಷವೇ ಇದಕ್ಕೆ ಜವಾಬ್ಧಾರಿಯಾಗಿದೆ. ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರು ಕೂಡ ಅವರನ್ನೇ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಸ್ಪೀಕರ್ ಅವರು ಸ್ಪೀಕರ್ ಅಲ್ಲ, ರಾಜಕೀಯ ಪಕ್ಷದ ಪ್ರತಿನಿಧಿಯಂತೆ ವರ್ತಿಸುತ್ತಿದ್ದಾರೆ. ನಾನೂ ಈಗಲೂ ಹೇಳುತ್ತೇನೆ. ಈಶ್ವರಪ್ಪ ದೊಡ್ಡ ರಾಷ್ಟ್ರದ್ರೋಹಿ ಎಂದು ಕಿಡಿಕಾರಿದರು.

ಸದನದಲ್ಲಿ ಕಾಂಗ್ರೆಸ್ ಪ್ರತಿಭಟನೆ ವಿಚಾರಕ್ಕೆ ರಾಷ್ಟ್ರಧ್ವಜ ಬಳಸಿಕೊಂಡ ವಿಚಾರ ಕುರಿತಂತೆ ಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಷ್ಟ್ರಧ್ವಜ ಗೌರವದ ಸಂಕೇತ. ಅದನ್ನು ಗೌರವದ ಸಂಕೇತವಾಗಿ ನಾವು ಬಳಸಿಕೊಂಡಿದ್ದೇವೆ. ಬಿಜೆಪಿಯವರು ತಿರಂಗಾ ಯಾತ್ರೆ ಮಾಡಿದರು ಯಾಕೆ ಮಾಡಿದರು, ಲಕ್ನೋದಲ್ಲಿ ಕಲ್ಯಾಣ ಸಿಂಗ್ ಸತ್ತಾಗ ರಾಷ್ಟ್ರಧ್ವಜವನ್ನು ಹಾಕಿ ಗೌರವಿಸಿದ್ದರು. ಈ ವೇಳೆ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಪಾರ್ಟಿ ಫ್ಲ್ಯಾಗ್ ಹಾಕಿದ್ರು ಯಾಕೆ ಹೀಗೆ… ಯೋಗಿನಾಥನ್ ರಾಷ್ಟ್ರಧ್ವಜಕ್ಕಿಂತ ಮೇಲೆ ಕೇಸರಿ ಧ್ವಜವನ್ನು ಹಾರಿಸಿದ್ದರು, ಏನಿದರ ಅರ್ಥ ಬಿಜೆಪಿಯರು ಏಕೆ ಈ ರಾಷ್ಟ್ರಧ್ವಜವನ್ನು ಬಳಸಿಕೊಂಡರು ಎಂದು ಪ್ರಶ್ನೆ ಮಾಡಿದರು. ನಾವು ರಾಷ್ಟ್ರದ ಗೌರವದ ಸಂಕೇತವಾಗಿ ರಷ್ಟ್ರಧ್ವಜವನ್ನ ಬಳಸಿದ್ದೇವೆ. ಅದರ ಗೌರವವನ್ನು ಕಾಪಾಡಿ ಎಂದು ನಾವು ಕೇಳಿಕೊಳುತ್ತಿದ್ದೇವೆ ಎಂದರು.

ಇನ್ನು ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದೆ. ಪ್ರತಿಭಟನೆ ನೆಪದಲ್ಲಿ ಕಾಂಗ್ರೆಸ್ ಪರೀಸ್ಥಿತಿಯನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂಬ ವಿಚಾರಕ್ಕೆ ಮಾತನಾಡಿದ ಅವರು, ರಾಜ್ಯದಲ್ಲಿ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಸೋಲನ್ನನುಭವಿಸಿದೆ. ಕೇರಳದ ನಾರಾಯಣ ಗುರುಗಳ ಮೂರ್ತಿ ವಿಚಾರದಲ್ಲಿ ಬಿಜೆಪಿಗೆ ಮುಖಭಂಗವಾಗಿದೆ. ಈಗ ಅವರಿಗೆ ಹೇಳಲು ಏನೂ ಉಳಿದಿಲ್ಲ. ಎಸ್‍ಡಿಪಿಐನವರ ಮೂಲಕ ಈ ವಿಚಾರವನ್ನು ತಂದಿದ್ದಾರೆ. ಹಿಜಾಬ್ ವಿಚಾರದಲ್ಲಿ ಇಷ್ಟುದಿನ ಇಲ್ಲದ ಕೋಡ್‍ನ್ನು ಈಗ ತರುವ ಪ್ರಸಂಗ ಏನಿತ್ತು. ಸರಕಾರದ ಸಕ್ರ್ಯೂಲರ್ ಮೇಲೆ ನ್ಯಾಯಾಲಯ ಒಂದು ಆದೇಶವನ್ನು ನೀಡಿದ್ದಾರೆ. ಈ ಮೊದಲು ಯಾರೂ ಕೇಸರಿ ಶಾಲನ್ನು ಹಾಕಿಕೊಂಡು ಶಾಲೆ ಕಾಲೇಜಿಗೆ ಬರುತ್ತಿರಲಿಲ್ಲ. ಆದರೆ ಅವರು ಮೊದಲಿನಿಂದಲೂ ಸ್ಕಾರ್ಫ ಹಾಕಿಕೊಂಡು ಬರುವುದು ಗೊತ್ತಿದೆ. ಉತ್ತರ ಕರ್ನಾಟಕದಲ್ಲಿ ಹೆಣ್ಣುಮಕ್ಕಳು ತಲೆಯ ಮೇಲೆ ಸೆರಗು ಹೊತ್ತುಕೊಳ್ಳುವುವದು ಸಾಮಾನ್ಯ. ರಾಷ್ಟಪತಿಯಾಗಿದ್ದಾಗ ಪ್ರತಿಭಾ ತಾಯಿ ಪಾಟೀಲ್ ತಲೆಯ ಮೇಲೆ ಸೆರಗು ಹೊದ್ದುಕೊಳ್ಳುತ್ತಿದ್ದರು ಎಂದು ಹಿಜಾಬ್ ಕುರಿತು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.

ಇನ್ನು ಸಚಿವ ಈಶ್ವರಪ್ಪ ನೀಡಿದ್ದ ಹೇಳಿಕೆ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇನ್ನು ಪ್ರತಿಪಕ್ಷ ಈಶ್ವರಪ್ಪ ಹೇಳಿಕೆ ವಿಚಾರವನ್ನು ಸದನದಲ್ಲಿ ದೊಡ್ಡ ವಿಚಾರವಾಗಿ ಮಾಡಿ ಗದ್ದಲಕ್ಕೆ ಕಾರಣವಾಗಿದೆ. ಇನ್ನು ಈ ವಿಚಾರ ಎಲ್ಲಿಗೆ ಹೋಗಿ ತಲುಪಲಿದೆ ಎನ್ನುವುದು ಮಾತ್ರ ಕಾದು ನೋಡಬೇಕಿದೆ.

 

Tags:

error: Content is protected !!