ಸಂಡೇ ಕೂಲ್ ಆಗಿಯೇ ಇರಬೇಕಲ್ಲವಾ..? ನಾನು ಯಾವಾಗಲೂ ಕೂಲ್ ಆಗಿಯೇ ಇರುತ್ತೇನೆ. ನಾನು ತಲೆಕೆಡಿಸಿಕೊಳ್ಳೋದು ಯಾವಾಗ ಎಂದರೆ ಸಮಾಜದಲ್ಲಿ ಡಿಸ್ಟರ್ಬ್ ಆದಾಗ, ಇಲ್ಲ ಅಂದ್ರೆ ನಾನು ಯಾವಾಗಲೂ ಕೂಲ್ ಆಗಿರುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತಿದ್ದ ವೇಳೆ ಡಿಕೆಶಿ ಮತ್ತು ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ ಹುಚ್ಚು ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಆ ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡಲ್ಲ. ನಾನು ಹಿಜಬ್ ಬಗ್ಗೆ ಮಾತನಾಡಿದ್ದು ನಿಜ. ಆದರೆ ಈಗ ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ. ಅವರು ಯಾರು ನನ್ನ ಬಗ್ಗೆ ಮಾತನಾಡೋಕೆ. ಅವರು ಒಂದು ರಾಜಕೀಯ ಪಕ್ಷದ ನಾಯಕರು, ನಾನು ಅವರ ಬಗ್ಗೆ ಮಾತನಾಡಲ್ಲ, ನಾನ್ಯಾಕೆ ಅವರ ಬಗ್ಗೆ ಮಾತನಾಡಲಿ ಎಂದರು.
ಇನ್ನು ಸಿಎಂ ಇಬ್ರಾಹಿಂ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಯಿಸಿದ ಸಿದ್ದರಾಮಯ್ಯ ಇಬ್ರಾಹಿಂ ಪಾರ್ಟಿ ಬಿಡಲ್ಲ, ಅವರು ಏನಾದ್ರು ಮಾಡ್ಲಿ ಸಂಬಂಧ ಇಲ್ಲ. ಆದರೆ ಅವರು ಪಕ್ಷ ಬಿಡಲ್ಲ, ಹೆಚ್.ಸಿ.ಮಹದೇವಪ್ಪ ಮಾತಾಡಿದ್ದಾರೆ. ಕೋಪ ಕಡಿಮೆ ಆಗ್ಲಿ, ಅಮೇಲೆ ನಾನು ಭೇಟಿ ಮಾಡುತ್ತೇನೆ. ವಿಪಕ್ಷ ನಾಯಕ ಸ್ಥಾನ ಸಿಕ್ಕಿಲ್ಲ ಅಂತ ಕೋಪ ಇರುತ್ತದೆ. ವೀರೇಂದ್ರ ಪಾಟೀಲ್ ಜೊತೆ ಕಾಂಗ್ರೆಸ್ ಹೋಗಿದ್ದ, ಆಗ ನಾನು ಕಾಂಗ್ರೆಸ್‍ನಲ್ಲಿ ಇರಲಿಲ್ಲ. ನಾನು ಆಗ ಇಲ್ಲ ಅಂದ್ಮೇಲೆ ನಾನೇಕೆ ಆಗಿನ ಘಟನೆ ಬಗ್ಗೆ ಮಾತಾಡಲಿ. ಸಿ.ಎಂ.ಇಬ್ರಾಹಿಂ ನನ್ನ ಸ್ನೇಹಿತ. ಅವನು ಎಲ್ಲೂ ಹೋಗಲ್ಲ ಅನ್ನೋ ವಿಶ್ವಾಸವಿದೆ ಎಂದರು.
ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ನೆಮ್ಮದಿಯಾಗಿಲ್ಲ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲ ಹಳದಿ ಬಿಡಿ. ನನ್ನ ಭಾಷಣ ಕೇಳಲು ಸಿದ್ದರಾಮಯ್ಯ ಮೋಟರ್ ಸೈಕಲ್‍ನಲ್ಲಿ ಬರ್ತಿದ್ದ ಎಂಬ ಇಬ್ರಾಹಿಂ ಮಾತಿಗೆ ನಾನು ಇಬ್ರಾಹಿಂ ಭಾಷಣ ಕೇಳಲು ಹೋಗಿದ್ದು ನಿಜ. ಟೌನ್ ಹಾಲ್‍ನಲ್ಲಿ ಭಾಷಣ ಕೇಳಲು ಹೋಗಿದ್ದೆ. ಇದನ್ನ ನಾನೇ ಇಬ್ರಾಹಿಂಗೆ ಹೇಳಿದ್ದೆ ಆಗ ವಿದ್ಯಾರ್ಥಿ ನಾನು, ಆಗ ಸೈಕಲ್ಲೇ ಇರಲಿಲ್ಲ ಮೋಟರ್ ಸೈಕಲ್ ಎಲ್ಲಿತ್ತು ಎಂದು ಪ್ರಶ್ನಿಸಿದರು.
ಒಟ್ಟಿನಲ್ಲಿ ಸಿ.ಎಂ.ಇಬ್ರಾಹಿಂ ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಒಂದು ಕಾಲು ಹೊರಗೆ ಇಟ್ಟಿದ್ದು, ಜೆಡಿಎಸ್ ಸೇರಲು ನಿರ್ಧರಿಸಿದ್ದಾರೆ. ಆದರೂ ಸಿದ್ದರಾಮಯ್ಯ ಮಾತ್ರ ಸಿ.ಎಂ.ಇಬ್ರಾಹಿಂ ನಮ್ಮ ಪಕ್ಷ ಬಿಡಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.