Accident

ಅರುಣಾಚಲ ಪ್ರದೇಶದಲ್ಲಿ ಹಿಮಪಾತ: 7 ಸೈನಿಕರು ಅಪಾಯದಲ್ಲಿ

Share

ಭಾರತದ ಈಶಾನ್ಯ ಗಡಿ ಭಾಗದ ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದ ಹಿಮಪಾತದಲ್ಲಿ 7 ಸೈನಿಕರು ಸಿಲುಕಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್‌ ಕರ್ನಲ್‌ ಹರ್ಷವರ್ಧನ್‌ ಪಾಂಡೆ, ಅರುಣಾಚಲ ಪ್ರದೇಶದ ಕಮೆಂಗ್‌ ಸೆಕ್ಟರ್‌ ನ ಎತ್ತರದ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದರು.

ಗಸ್ತು ತಿರುಗುತ್ತಿದ್ದ ವೇಳೆ ಸಂಭವಿಸಿದ ಹಿಮಪಾತಕ್ಕೆ 7 ಸೈನಿಕರು ಸಿಲುಕಿಕೊಂಡಿದ್ದಾರೆ. ಅವರ ರಕ್ಷಣೆಗಾಗಿ ಕಾರ್ಯಾಚರಣೆ ಮಾಡಲಾಗುತ್ತಿದ್ದು, ವಿಶೇಷ ತಂಡಗಳನ್ನು ಏರ್‌ ಲಿಪಟ್‌ ಮೂಲಕ ರಕ್ಷಣೆಗೆ ಕರೆತರಲಾಗಿದೆ ಎಂದು ತಿಳಿಸಿದ್ದಾರೆ.

ಗಡಿನಾಡಿನ ಹಲವು ಎತ್ತರದ ಪ್ರದೇಶಗಳು ಈ ತಿಂಗಳಿನಲ್ಲಿ ಭಾರೀ ಹಿಮಪಾತಕ್ಕೆ ಸಾಕ್ಷಿಯಾಗುತ್ತಿವೆ. ಇಟಾನಗರ ಬಳಿಯ ಡೇರಿಯಾ ಬೆಟ್ಟವು 34 ವರ್ಷಗಳ ನಂತರ ಹಿಮಪಾತಕ್ಕೆ ಸಾಕ್ಷಿಯಾಗಿದ್ದು, ಕಮೆಂಗ್‌ ಪ್ರದೇಶದಲ್ಲಿಯೂ ಕೂಡ ಎರಡು ದಶಕಗಳ ನಂತರ ಹಿಮಪಾತ ಸಂಭವಿಸಿದೆ.

Tags:

error: Content is protected !!