Belagavi

ಅರಗನ್ ತಾಲಾಬ್‍ನಲ್ಲಿ ಆತ್ಮಹತ್ಯೆಗೆ ಶರಣಾದ ತಾಯಿ ಮಕ್ಕಳ ಅಂತ್ಯಸಂಸ್ಕಾರ..!

Share

ಬೆಳಗಾವಿಯ ಹಿಂಡಲಗಾ ಗಣಪತಿ ಮಂದಿರದ ಮುಂಭಾಗದಲ್ಲಿರುವ ಅರಗನ್ ತಾಲಾಬ್‍ನಲ್ಲಿ ತಾಯಿ ತನ್ನ ಇಬ್ಬರು ಮಕ್ಕಳ ಜೊತೆಗೆ ಆತ್ಮಹತ್ಯೆಗೆ ಶರಣಾದ ತಾಯಿ ಮಕ್ಕಳ ಅಂತ್ಯ ಸಂಸ್ಕಾರವನ್ನು ಇಂದು ನೆರವೇರಿಸಲಾಗಿದೆ.

ಹೌದು ಬೆಳಗಾವಿಯ ಸಹ್ಯಾದ್ರಿ ನಗರದ ನಿವಾಸಿ ಕ್ರಿಷಾ ಕೇಶ್ವಾನಿ (37) ಎಂಬ ಮಹಿಳೆ ಕೌಟುಂಬಿಕ ಸಮಸ್ಯೆಗಳಿಗೆ ಮನನೊಂದು ನಿನ್ನೆ ಶುಕ್ರವಾರ ಅರಗನ್ ತಾಲಾಬ್‍ಗೆ ಹಾರಿ ತನ್ನ ಇಬ್ಬರು ಮಕ್ಕಳು ಭಾವಿರ್(4), ವಿರೇನ್(7), ಜೊತೆಗೆ ಆತ್ಮಹತ್ಯೆಗೆ ಶರಣಾಗಿದ್ರು. ನಿನ್ನೆ ಸಾಯಂಕಾಲ ಎಸ್‍ಡಿಆರ್‍ಎಫ್. ಹಾಗೂ ಎಪಿಎಂಸಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಾಯಿ ಹಾಗೂ ಮಗುವಿನ ಮೃತ ದೇಹವನ್ನು ಹೊರತೆಗೆದಿದ್ದಾರೆ. ಇನ್ನೊಂದು ಮೃತ ದೇಹಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಇಂದು ಮಧ್ಯಾಹ್ನ ಎಸ್‍ಡಿಆರ್‍ಎಫ್ ತಂಡದ ವತಿಯಿಂದ ಮತ್ತೊಂದು ಮಗು ವಿರೇನ್(7) ಮೃತ ದೇಹವನ್ನು ಹೊರತೆಗೆದಿದ್ದಾರೆ.

ಇನ್ನು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಇನ್ನು ಆಸ್ಪತ್ರೆಯ ಬಳಿ ಪಾಲಕರ ಆಕ್ರಂದನ ಮುಗಿಲುಮುಟ್ಟಿತ್ತು. ತಾಯಿ ಹಾಗೂ ಮಕ್ಕಳ ಅಂತಿಮ ಸಂಸ್ಕಾರವನ್ನು ಇಂದು ಶನಿವಾರ ಭಾರವಾದ ಮನಸ್ಸಿನಿಂದ ಕುಟುಂಬಸ್ಥರಿಂದ ನೆರವೇರಿಸಲಾಯಿತು.
ಇನ್ನು ಈ ದುರ್ಘಟನೆ ಕುರಿತಂತೆ ಮಾತನಾಡಿದ ಕರಿಷ್ಮಾ ಕೇಶ್ವಾನಿ ತಾಯಿ, ನನ್ನ ಮಗಳಿಗೆ ಅವಳ ಗಂಡನ ಮನೆಯಲ್ಲಿ ಸಾಕಷ್ಟು ಕುರುಕುಳ ನೀಡಲಾಗುತ್ತಿತ್ತು. ಈ ಕುರಿತಂತೆ ಅವಳು ನನ್ನೊಂದಿಗೆ ಫೋನ್‍ನಲ್ಲಿ ಮಾತನಾಡುತ್ತಿದ್ದಳು. ತನಗೆ ಗಂಡನ ಮನೆಯಲ್ಲಿ ಕಿರುಕುಳ ನೀಡುವುದಾಗಿ ಹೇಳಿಕೊಳ್ಳುತ್ತಿದ್ದು. ಇನ್ನು ನನ್ನ ಮಗಳು ಕುರಿತು ಏನಾದರೂ ಸಮಸ್ಯೆಇದ್ದರೆ ನಮಗೆ ಅವರು ಹೇಳಬೇಕಿತ್ತು. ಆದರೆ ಈ ರೀತಿ ಮಾಡಬರದಿತ್ತು. ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಗೋಳಾಡಿದರು.

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಮೃತ ಕೃಷಾ ಸಹೋದರ, ಕೃಷಾ ಗಂಡನ ಮನೆಯವರು ನಮಗೆ ಫೋನ್ ಮಾಡಿ ಮಕಕಳೊಂದಿಗೆ ಎಲ್ಲಯೋ ಹೊರಗೆ ಹೋಗಿದ್ದಾಳೆ. ಹಾಗಾಗಿ ನಿಮ್ಮಲ್ಲಿ ಬಂಧಿದ್ದಾರಾ ನೋಡಿ ಎಂದು ವಿಚಾರಿಸಿದ್ದರು. ಇನ್ನು 12 ಗಂಟೆಗ ಅವಳು ಕೆರೆಗೆ ಹಾರಿದರೆ ಅದು ಹೇಗೆ ಮೃತ ಶರೀರಗಳು ಮೇಲೆ ತೇಲುತ್ತವೆ. ಹಾಗಾಗಿ ಅವಳ ಗಂಡನ ಮನೆಯವರೇ ಅವಳನ್ನು ಹಾಗೂ ಅವಳ ಮಕ್ಕಳನ್ನು ಗಂಡನ ಮನೆಯವರೇ ಕೊಂದು ಕೆರೆಗೆ ಹಾಕಿದ್ದಾರೆ. ಹಾಗಾಗಿ ಈ ಕುರಿತಂತೆ ತನಿಖೆ ಮಾಡಬೇಕೆಂದು ಒತ್ತಾಯಿಸಿದರು.
ಇನ್ನು ಕೆರೆಗೆ ಹಾರಿದ ತಾಯಿ ಮಕ್ಕಳ ಸಾವು ಈಗ ಕೊಲೆಯ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇನ್ನು ಈಗಾಗಲೇ ಮೃತ ಕೃಆ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದು ಇನ್ನು ತನಿಖೆಯಿಂದಷ್ಟೇ ಸತ್ಯಾಂಶ ಹೊರಬೀಳಬೆಕಿದೆ.

 

Tags:

error: Content is protected !!