ಬೆಳಗಾವಿಯಲ್ಲಿ ಇತ್ತಿಚೆಗೆ ನಿಧನರಾಗಿದ್ದ ಕ್ರಿಕೆಟ್ ಪಟು ಅನಂತ ಸಾವಂತ್‍ಗೆ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದೇ ಜನವರಿ 31ರಂದು ಅತ್ಯುತ್ತಮ ಕ್ರಿಕೆಟ್ ಪಟುವಾಗಿ ಬೆಳಗಾವಿಯಲ್ಲಿ ಗುರುತಿಸಿಕೊಂಡಿದ್ದ ಅನಂತ ಸಾವಂತ್ ಅಕಾಲಿಕವಾಗಿ ಮೃತರಾಗಿದ್ದರು. ಹೀಗಾಗಿ ಗುರುವಾರ ನಗರದ ಸರ್ದಾರ್ ಮೈದಾನದಲ್ಲಿ ಅನಂತ್ ಸಾವಂತ್‍ಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮೈದಾನದಲ್ಲಿ ಅನಂತ ಸಾವಂತ್ ಅವರ ಬೃಹದಾಕಾರದ ಬ್ಯಾನರ್ ಹಾಕಿ ಗೌರವ ಸಮರ್ಪಿಸಲಾಯಿತು.
ಈ ವೇಳೆ ಮಾತನಾಡಿದ ಗಣ್ಯರು ಬೆಳಗಾವಿಯಲ್ಲಿ ಸಾಮಾನ್ಯ ಹುಡುಗರನ್ನು ಹುರುದುಂಬಿಸಿ ಕ್ರೀಡೆಯ ಬಗ್ಗೆ ಆಸಕ್ತಿ ವಹಿಸುವಂತೆ ಮಾಡುತ್ತಿದ್ದರು. ಇವರ ನಿಧನದಿಂದ ಕ್ರೀಡಾ ಲೋಕಕ್ಕೆ ತುಂಬಲಾರದ ನಷ್ಟ ಎಂದು ಸ್ಮರಿಸಿಕೊಂಡರು.
ಈ ವೇಳೆ ಅಗಲಿದ ಅನಂತ ಸಾವಂತ್‍ಗೆ ಸಮಾಜ ಸೇವಕ ಗಂಗಾಧರ ಪಾಟೀಲ್, ನಗರ ಸೇವಕ ಶಂಕರ್ ಪಾಟೀಲ್, ರಾಹುಲ್ ಜಾಧವ್, ರಾಜು ಸದರೆ, ಶರದ್ ಪಾಟೀಲ್, ಪ್ರವೀಣ ಶಿಂಧೆ, ಪರುಶರಾಮ್ ತೋರೆ, ಮಹೇಶ ಸುಹಾಸ್, ಅನಿಲ್, ಸುನೀಲ್, ಶಂಭು, ರಮೇಶ, ಪಂಕಜ್ ಸೇರಿದಂತೆ ಇನ್ನಿತರರು ಶ್ರದ್ಧಾಂಜಲಿ ಸಲ್ಲಿಸಿದರು.