Hukkeri

ಅಂಬೇಡ್ಕರ್ ರವರಿಗೆ ಅವಮಾನಿಸಿದ ನ್ಯಾಯಾಧೀಶನನ್ನು ದೇಶದಿಂದ ಗಡಿಪಾರು ಮಾಡಿ – ಮುಸ್ಲಿಂ ಸಂಘಟನೆ.

Share

ರಾಯಚೂರಿನ ನ್ಯಾಯಾಧಿಶ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್ ಭಾವ ಚಿತ್ರಕ್ಕೆ ಅವಮಾನಿಸಿದ್ದನ್ನು ಖಂಡಿಸಿ ಇಂದು ಹುಕ್ಕೇರಿ ನಗರದ ಮುಸಲ್ಮಾನ ಸಂಘಟನೆಯ ಹನ್ನೊಂದು ಜಮಾತ ಸದಸ್ಯರು ಪ್ರತಿಭಟನೆ ನಡೆಸಿದರು.

ಜಮಾತ ಸದಸ್ಯರು ಕಳೆದ ಜನೆವರಿ 26 ಗಣರಾಜ್ಯೋತ್ಸವ ದಿನದಂದು ರಾಯಚೂರಿನ ನ್ಯಾಯಾಧಿಶ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್ ಭಾವ ಚಿತ್ರಕ್ಕೆ ಅವಮಾನ ಮಾಡಿ ಇಡಿ ದೇಶ ತಲೆ ತಗ್ಗಿಸುವಂತೆ ಮಾಡಿದ್ದಾರೆ ಕಾರಣ ಅವರನ್ನು ಸೇವೆಯಿಂದ ವಜಾಮಾಡಿ ದೇಶದಿಂದ ಗಡಿಪಾರು ಮಾಡ ಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಮಾಸಾಭಿ ದರ್ಗಾದಿಂದ ಪ್ರತಿಭಟನೆ ರ್ಯಾಲಿ ನಡೆಸಿ ಆಡಳಿತ ಭವನಕ್ಕೆ ತೇರಳಿ ತಹಸಿಲ್ದಾರ ಮುಖಾಂತರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹನ್ನೂಂದು ಜಮಾತ ಸದಸ್ಯರಾದ ಸಲಿಂ ನದಾಫ್, ಶಬ್ಬಿರ ಸನದಿ, ಸಲಿಂ ಕಳಾವಂತ, ಕಭೀರ ಮಲ್ಲಿಕ, ಡಿ ಆರ್ ಖಾಜಿ, ಇರ್ಷಾದ ಮೋಕಾಶಿ, ಜಾಫರ ಮಾಲದಾರ,ಸುನಿಲ ಭೈರನ್ನವರ, ಮೇಹಬೂಬ ಅತ್ತಾರ, ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!