ಸರಕಾರ ಅಂಗನವಾಡಿ ಕೇಂದ್ರಗಳಲ್ಲಿ ಶಿಶುವಿಹಾರಗಳನ್ನು ಪ್ರಾರಂಭಮಾಡಲು ಚಿಂತನೆ ನಡೆಸಿದೆ. ಆದರೆ ಅಂಗನವಾಡಿ ಕಾರ್ಯಕರ್ತೆಯರಿಗೆ ಈಗಾಗಲೇ ಸಾಕಷ್ಟು ಜವಾಬ್ದಾರಿಗಳಿವೆ. ಹಾಗಾಗಿ ಸರಕಾರ ಅಂಗನವಾಡಿ ಕೇಂದ್ರಗಳನ್ನು ಹೊತರುಪಡಿಸಿ ಈ ಕೇಂದ್ರಗಳನ್ನು ಪ್ರಾರಂಭಿಸಬೇಕು. ಮತ್ತು ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಕರ್ನಾಟಕ ರಾಜಗಯ ಸರಕಾರ ಅಂಗನವಾಡಿ ಕೇಂದ್ರಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಪರಾರಂಭಿಸಲು ಚಿಂತನೆ ನಡೆಸಿದೆ. ಆದರೆ ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ಸಾಕಷ್ಟು ಜವಾಬ್ಧಾರಿಗಳಿವೆ. ಹಾಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಈ ಶಿಶುಪಾಲನಾ ಕೇಂದ್ರಗಳನ್ನು ಪ್ರಾರಂಭಿಸಬಾರದು. ಇನ್ನು ಚಳಿಗಾಲದ ಅಧಿವೇಶನದ ವೇಳೆ ನಾವು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರಕಾರಕ್ಕೆ ಮನವಿ ಮಾಡಿದ್ದೇವು. ಅವುಗಳಲ್ಲಿ ಯಾವುದೇ ಈಡೇರಿಲ್ಲ. ಹಾಗಾಗಿ ನಮ್ಮ ಬೇಡಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಇನ್ನು ಈ ವೆಳೆ ಮತನಾಡಿದ ಅಂಗನವಾಡಿ ಕಾರ್ಯಕರ್ತೆ ಸುಜಾತಾ ಬೆಳಗಾಂವಕರ್, ಸರಕಾರದ ಈ ಯೋಜನೆ ಯಶಸ್ವಿಯಾಗಿವುದಿಲ್ಲ. ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ಸಾಕಷ್ಟು ಜವಾಬ್ಧಾರಿಗಳಿವೆ. ಇನ್ನು ಅನೇಕ ಜನ ಮಹಿಳೆಯರು ನಿರುದ್ಯೋಗಿಗಳಿದ್ದಾರೆ. ಅವರಿಗೆ ಈ ಜವಾಬ್ಧಾರಿಯನ್ನು ವಹಿಸಿ. ಆದರೆ ಅಂಗನವಾಡಿ ಕಾಯ್ಕರ್ತೆಯರಿಗೆ ಈ ಜವಾಬ್ದಾರಿಯನ್ನು ನಡಬೇಡಿ ಎಂದು ಮನವಿ ಮಾಡಿದರು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಯಲ್ಲುಬಾಯಿ ಸೀಗೇಹಳ್ಳಿ, ಸರಕಾರ ಈಗಾಗಲೇ ಸಾಕಷ್ಟು ಜವಾಬ್ದಾರಿಗಳಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತಷ್ಟು ಜವಾಬ್ದಾರಿಗಳನ್ನು ನೀಡುತ್ತಿದೆ. ಇನ್ನು ಸರಕಾರದ ಈ ಯೋಜನೆ ಯಶಸ್ವಿಯಾಗಲಾರದು. ಅಂಗನವಾಡಿ ಕಾರ್ಯಕರ್ತೆಯರು ಕಡಿಮೆ ಸಂಬಳದಲ್ಲಿ ಈಗಾಗಲೇ ಸಾಕಷ್ಟು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದೇವೆ. ಹಾಗಾಗಿ ಸರಕಾರ ಅಂಗನವಾಡಿ ಕೇಂದ್ರಗಳ ಪಕ್ಕದಲ್ಲೇ ಈ ಶಿಶು ಪಾಲನಾ ಕೇಂದ್ರಗಳನ್ನು ಪ್ರಾರಂಭಿಸಲಿ. ನಾವೂ ಕೂಡ ಸಹಕಾರ ನೀಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಸರಕಾರ ಅಂಗನವಾಡಿ ಕೇಂದ್ರಗಳಲ್ಲಿ ಈ ಶಿಶುಪಾಲನಾ ಕೇಂದ್ರಗಳನ್ನು ಪ್ರಾರಂಭಿಸುವುದು ಬೇಡ ಎಂದರು.
ಇನ್ನು ಇದೇ ವೇಳೆ ಮಾತನಾಡಿದ ನಾಗರಿಕರು, ಸರಕಾರ ಈಗಾಗಲೇ ಅಂಗನವಾಡಿ ಕೇಂದ್ರಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ಆದರೆ ರಾಜ್ಯಸರಕಾರ ಈ ಶಿಶುಪಾಲನಾ ಕೇಂದ್ರ ಸ್ಥಪನೆಗೆ ನಮ್ಮ ವಿರೋದವಿಲ್ಲ. ಆದರೆ ಅಂಗನವಾಡಿ ಕೇಂದ್ರದಲ್ಲಿ ಸ್ಥಾಪನೆ ಮಡಲು ನಮ್ಮ ವಿರೋಧವಿದೆ. ಇನ್ನು ಶಿಶುಪಲನಾ ಕೆಂದ್ರಗಳಲ್ಲಿ ನೌಕರಸ್ತರು ಪಾಲಕರು ತಮ್ಮ ಮಕ್ಕಳನ್ನು ಬಿಟ್ಟು ಹೋಗುತ್ತಾರೆ. ಇನ್ನು ಅಂಗನವಾಡಿ ಕಾರ್ಯಕರ್ತೆಯರು ಅವರು ಬರುವ ವರೆಗೂ ಮಕ್ಕಳನ್ನು ಸಂಭಾಳಿಸಬೇಕಾಗುತ್ತದೆ. ಹಾಗಾಗಿ ಇದು ಬೇರೆ ಕೆಲಸಗಳಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಹೊರೆಯಾಗಲಿದೆ ಎಂದರು.
ಇನ್ನು ಈಗಾಗಲೇ ಸರಕಾರ ಕೈಗೊಂಡ ಈ ನಿರ್ಧಾರಕ್ಕೆ ರಾಜಯಾದ್ಯಂತ ತೀವೃ ವಿರೋಧ ವ್ಯಕ್ತವಗುತ್ತಿದೆ. ಇನ್ನು ಈ ಕುರಿತಂತೆ ಅಂಗನವಾಡಿ ಕಾರ್ಯಕರ್ತೆಯರು ಸರಕಾರಕ್ಕೆ ಮನವಿ ಮಾಡಿದ್ದಾರೆ. ಇನ್ನು ಸರಕಾರ ಕುರಿತಂತೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.