ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಕೊಗ್ನೋಳಿ ಮುಖ್ಯ ರಸ್ತೆಯಲ್ಲಿರುವ ಬಾವಿಗೆ ಬಿದ್ದು ವೃದ್ಧೆ ಸಾವನ್ನಪ್ಪಿದ್ದಾರೆ. ಮೃತ ವೃದ್ಧೆಯ ಹೆಸರು ಲಕ್ಷ್ಮೀಬಾಯಿ ಜಾನು ಜಾಧವ್ (ವಯಸ್ಸು 82). ಸ್ಥಳದಿಂದ ಬಂದ ಮಾಹಿತಿ ಪ್ರಕಾರ ಲಕ್ಷ್ಮೀಬಾಯಿ ಜಾಧವ್ ಅವರು ಮಧ್ಯಾಹ್ನ 2 ಗಂಟೆ ಸುಮಾರಿಗೆ ಗದ್ದೆಗೆ ಬರುತ್ತಿದ್ದಂತೆ ಮನೆಯಿಂದ ಹೊರ ಬಂದಿದ್ದಾರೆ. ಸಮಯ ಕಳೆದರೂ ಮನೆಗೆ ಹಿಂತಿರುಗದ ಕಾರಣ ಮನೆಯಲ್ಲಿದ್ದ ಸಂಬಂಧಿಕರು ಹುಡುಕಾಡಿದ್ದಾರೆ. ಇಲ್ಲಿನ ಮುಖ್ಯರಸ್ತೆಯಲ್ಲಿರುವ ದಾವರಿ ಬಾವಿಯಲ್ಲಿ ಲಕ್ಷ್ಮೀಬಾಯಿ ಶವ ಪತ್ತೆಯಾಗಿದೆ.

ಸ್ಥಳಕ್ಕೆ ನಿಪ್ಪಾನಿ ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ಐ, ಅನೀಲ ಕುಂಬಾರ ಕೊಗ್ನೋಳಿ ಒ ಪಿ ಪೊಲೀಸ್ ಠಾಣೆ ಎಎಸ್‌ಐ ಎಸ್.ಎ.ತೋಳಗಿ, ಪೊಲೀಸ್ ರಾಜು ಗೋರಖನವರ, ಎನ್.ಎಸ್.ಸಾಗರಕರ ಭೇಟಿ ನೀಡಿ ಮೃತದೇಹವನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ನಿಪಾಣಿಯ ಮಹಾತ್ಮಗಾಂಧಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳದಲ್ಲಿದ್ದ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ಸುದ್ದಿ ತಿಳಿದ ನಾಗರಿಕರ ದಂಡೇ ನೆರೆದಿತ್ತು. ಲಕ್ಷ್ಮೀಬಾಯಿ ಜಾಧವ್ ಅವರು ಪುತ್ರ, ಸೊಸೆ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.