ವಿಕೇಂಡ್ ಕರ್ಪ್ಯೂನ ಎರಡನೇ ದಿನವಾದ ಇಂದು ವಿಜಯಪುರ ನಗರದ ಗೋಳಗುಮ್ಮಟ ರಸ್ತೆ ಎದುರು ಪೊಲೀಸ್ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.

ಪ್ರತಿ ವಾಹನಗಳನ್ನು ತಪಾಸಣೆ ಮಾಡ್ತಿರೋ ಗೋಳಗುಮ್ಮಟ ಪೊಲೀಸರು ಮಾಸ್ಕ್ ಇಲ್ಲದೆ ಬೈಕ್ ಮೇಲೆ ಅಡ್ಡಾಡ್ತಿದ್ದಾರೆ. ಎಷ್ಟು ಹೇಳಿದ್ರು ಗುಮ್ಮಟನಗರಿ ಜನರು ಬುದ್ದಿ ಕಲಿಯುತ್ತಿಲ್ಲಾ, ಕರ್ಪ್ಯೂ ಇದೆ, ಕೊರೊನಾ ಕೇಸ್ 105ಕ್ಕೇರಿದೆ ಆದ್ರು ಸುಧಾರಿಸಿಕೊಳ್ಳುತ್ತಿಲ್ಲ, ಹೀಗಾಗಿ ಮಾಸ್ಕ್ ಹಾಕದವರಿಗೆ ಕ್ಲಾಸ್ ತೆಗೆದುಕೊಳ್ತಿರೋ ಪೊಲೀಸರು ಬೆಳಗಾವಿ-ಕಲಬುರ್ಗಿ ರಾಜ್ಯ ಹೆದ್ದಾರಿ ಯಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ವಿನಾಕಾರಣ ಅಡ್ಡಾಡೋರಿಗೆ ಪೊಲೀಸರು ವಾರ್ನಿಂಗ್ ಮಾಡುತ್ತಿದ್ದಾರೆ.ವಿಕೇಂಡ್ ಕರ್ಪ್ಯೂ ಹಿನ್ನಲೆ ಬಿಗಿ ಪೋಲಿಸ್ ಬಂದೋ ಬಸ್ತ್ ಮಾಡಲಾಗಿದೆ. ವಿಜಯಪುರ ನಗರದ ಗೋಳಗುಮ್ಮಟ ಮುಂಭಾಗದಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದು ಒಂದು ರಸ್ತೆಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಿ ಇನ್ನೊಂದು ರಸ್ತೆಯ ಮೂಲಕ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ವಾಹನ ತಪಾಸಣೆ ಮಾಡಿ ಅನಶ್ಯಕ ಸಂದರ್ಭದಲ್ಲಿ ಸಂಚರಿಸಲು ಮಾತ್ರ ಅವಕಾಶ ನೀಡುತ್ತಿದ್ದಾರೆ. ಅನವಶ್ಯಕ ವಾಗಿ ಹೊರ ಬಂದವರ ವಾಹ ಸೀಜ್ ಮಾಡುತ್ತಿದ್ದಾರೆ.ವಿಜಯಪುರ
ಎರಡನೇ ದಿನದ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನಲೆಯಲ್ಲಿ ವಿಶ್ವ ವಿಖ್ಯಾತ ವಿಜಯಪುರ ಗೋಳಗುಮ್ಮಟದ ಆವರಣ ಬಂದ್ ಮಾಡಲಾಗಿದೆ. ಪುರಾತತ್ವ ಇಲಾಖೆ ಸಿಬ್ಬಂದಿಯಿಂದ ಬಂದೋ ಬಸ್ತ್ ಮಾಡಲಾಗಿದ್ದು ಗೇಟ್ ಎರಡು ದಿನಗಳ ಕಾಲ ಪ್ರಾಚ್ಯವಸ್ತು ಇಲಾಖೆ ಬಂದ್ ಮಾಡಲಾಗಿದೆ. ಇನ್ನೂ ವಿಜಯಪುರ ಕ್ಕೆ ಆಗಮಿಸಿರುವ ಪ್ರವಾಸಿಗರು ಗೋಳಗುಮ್ಮಟದ ಒಳಗೆ ಪ್ರವೇಶ ಸಿಗದ ಕಾರಣ ಹೊರಗಿನಿಂದ ಸೆಲ್ಪಿ ತೆಗೆದುಕೊಂಡು ಖುಷಿ ಪಡ್ತಿದ್ದಾರೆ.
ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ವಿಜಯಪುರದ ವಿಶ್ವ ವಿಖ್ಯಾತ ಗೋಳಗುಮ್ಮಟ ಬಂದ್ ಮಾಡಲಾಗಿದೆ. ಗೋಳಗುಮ್ಮಟ ಪ್ರವೇಶಕ್ಕೆ ಪ್ರವಾಸಿಗರಿಗೆ ಭಾರತೀಯ ಪುರಾತತ್ವ ಇಲಾಖೆ ನಿರ್ಬಂಧ ಹೇರಿದೆ. ಹೀಗಾಗಿ ಗೋಳಗುಮ್ಮಟ ಆವರಣ ಬೀಕೊ ಎನ್ನುತ್ತಿದೆ. ಖಾಲಿ ಖಾಲಿಯಾಗಿರೋ ಗುಮ್ಮಟದ ಆವರಣ ಸ್ವಚ್ಛ ಗೊಳಿಸಲಾಗುತ್ತಿದೆ. 50 ಕ್ಕು ಅಧಿಕ ಕೆಲಸಗಾರರಿಂದ ಗೋಳಗುಮ್ಮಟ ಆವರಣದ ಸ್ವಚ್ಛತಾ ಕಾರ್ಯ ನಡೆದಿದೆ. ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ಹಿನ್ನೆಲೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಲಾಗಿದೆ. ಕರ್ಪ್ಯೂ ಹಿನ್ನೆಲೆ ಎರೆಡು ದಿನಗಳ ಕಾಲ ಗೋಳಗುಮ್ಮಟ ಪ್ರವೇಶಕ್ಕು ನಿರ್ಬಂಧ ಹೇರಿ ಸ್ವಚ್ಛತಾ ಕಾರ್ಯ ಗೋಳಗುಮ್ಮಟದ ಅಧಿಕಾರಿಗಳು ಪೂರ್ಣಗೊಳಿಸಲಾಗುತ್ತಿದೆ.