Uncategorized

2ಎ ಮೀಸಲಾತಿಗಾಗಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಪಂಚಮಸಾಲಿಗರು ಸರಿಯಾದ ಮಾಹಿತಿ ಕೊಡಿ

Share

ಭಾರತಕ್ಕೆ ಸ್ವತಂತ್ರ್ಯ ಸಿಕ್ಕು 75 ವರ್ಷ ಆಯಿತು. ಆದರೂ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಯ ಯಾವುದೇ ರೀತಿ ಸೌಲಭ್ಯ ಸಿಕ್ಕಿಲ್ಲ ಎಂದು ಪಂಚಮಸಾಲಿ ಕಾನೂನು ಘಟಕದ ರಾಜ್ಯಾಧ್ಯಕ್ಷ ದಿನೇಶ್ ಪಾಟೀಲ್ ಹೇಳಿದರು.

ಬುಧವಾರ ಬೆಳಗಾವಿಯ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿನೇಶ್ ಪಾಟೀಲ್ ನಮ್ಮ ಸಮಾಜ ಪಂಚಮಸಾಲಿ ಸಮಾಜ ರೈತಾಪಿ ಜನರಿದ್ದು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷವಾದರೂ, ನಾವು ಯಾವುದೇ ಮೀಸಲಾತಿ ಪಡೆದಿಲ್ಲ. ಹೀಗಾಗಿ ನಮ್ಮ ಸಮಾಜದ ಬಡವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ 2ಎ ಮೀಸಲಾತಿ ಸಿಗಬೇಕೆಂದರೆ, ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗಡೆ ಮತ್ತು ಸದಸ್ಯರನ್ನು ಒಳಗೊಂಡ ನಿಯೋಗ ಬೆಳಗಾವಿ ಜಿಲ್ಲೆಯಲ್ಲಿ ಜನವರಿ 5ರಿಂದ ಜನವರಿ 9ರವರೆಗೆ ಪ್ರವಾಸ ಮಾಡಲಿದೆ. ಈ ನಿಯೋಗ ಪ್ರತಿ ತಾಲೂಕಿನಲ್ಲಿ ಪ್ರವಾಸ ಮಾಡುತ್ತಿದ್ದು, ಎಲ್ಲ ಪಂಚಮಸಾಲಿಗರು ಸರಿಯಾದ ಮಾಹಿತಿಯನ್ನು ಅವರಿಗೆ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಮುಖಂಡರಾದ ಆರ್.ಕೆ.ಪಾಟೀಲ್, ರಾಜು ಮಗದುಮ್ಮ, ರುದ್ರಣ್ಣ ಚಂದರಗಿ, ಶಿವಪುತ್ರ ಪಟಕಲ್, ನಿಂಗಪ್ಪ ಪಿರೋಜಿ, ಆರ್.ಎಸ್.ಕಮತ್, ಆರ್.ಸಿ.ಪಾಟೀಲ್, ವಿಜಯ್ ಪಾಟೀಲ್, ಎ.ಸಿ.ಪಾಟೀಲ್, ರಾಮನಗೌಡ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Tags:

error: Content is protected !!