Politics

ಶಾಸಕರ ಎದುರಲ್ಲೇ ಹೈಡ್ರಾಮಾ: ಸಹನೆ ಕಳೆದುಕೊಂಡ ಶಾಸಕ, ನಡುರಸ್ತೆಯಲ್ಲೆ ಚಕಮಕಿ

Share

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದ ಬಿಜೆಪಿಯಲ್ಲಿ ಆಂತರಿಕ ಕಲಹ ಸ್ಪೋಟಗೊಂಡಿದೆ. ದೇವರಹಿಪ್ಪರಗಿ ಕ್ಷೇತ್ರದ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ ಎದುರಲ್ಲೇ ಮಾತಿನ ಚಕಮಕಿ ನಡೆದಿದೆ.

ಬಿಜೆಪಿ ಮಂಡಳ ಉಪಾಧ್ಯಕ್ಷ ಹಾಗೂ ಶಾಸಕರ ಬೆಂಬಲಿಗರ ಮದ್ಯೆ ನಡುರಸ್ತೆ ಯಲ್ಲಿಯೇ ವಾಗ್ವಾದ ವಾಗ್ವಾದ ನಡೆದು ಹೈಡ್ರಾಮಾ ಕ್ರಿಯೆಟ್ ಆಗಿತ್ತು.‌ಇನ್ನು ನಿನ್ನೆ ಸಾಯಂಕಾಲ‌ ನಡೆದಿರೋ ಘಟನೆಯಲ್ಲಿ ಕೈ ಕೈ ಮೀಲಾಯಿಸೋ ಹಂತಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕ ಸೋಮನಗೌಡ ಸ್ಥಳಿಯ ಕಾರ್ಯಕರ್ತರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲಾ ಹಾಗೂ ನಮ್ಮ‌ ಕರೆಗಳನ್ನು ಸ್ವೀಕರಿಸಲ್ಲಾ ಎಂದು ದೇವರಹಿಪ್ಪರಗಿ ಬಿಜೆಪಿ ಮಂಡಳ ಉಪಾಧ್ಯಕ್ಷ ಮುತ್ತುರಾಜ ಹಾಲಿಹಾಳ ಆರೋಪಿಸಿದ್ದರು. ಇದಕ್ಕೆ ತೀವ್ರ ಆಕ್ಷೇಪ‌ ವ್ಯಕ್ತಪಡಿಸಿದ ಶಾಸಕರ ಬೆಂಬಲಿಗರ ನಡುವೆ ಪರಸ್ಪರ ಮಾತಿನ ಚಕಮಕಿ, ವಾಗ್ವಾದ ನಡೆಯಿತು.

ಇನ್ನೂ ಕೆಲ‌ ಕಾಲ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ ಸಹನೆ ಕಳೆದುಕೊಂಡರು. ಬಳಿಕ ಬಿಜೆಪಿ ಹಾಗೂ ಗ್ರಾಮದ ಮುಖಂಡರು ಪರಿಸ್ಥಿತಿ ತಿಳಿಗೊಳಿಸಿದರು.

Tags:

error: Content is protected !!