ವಿಜಯಪುರ ಜಿಲ್ಲೆಯಲ್ಲಿಂದು ಕೊರೊನಾ ಸ್ಪೋಟಗೊಂಡಿದೆ. ಇಂದು ಒಂದೇ ದಿನ 37 ಜನರಲ್ಲಿ ಪಾಸಿಟಿವ್ ದೃಢವಾಗಿದೆ.

ಈ ಪೈಕಿ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿಯೇ 22 ಜನರಿಗೆ ಪಾಸಿಟವ್ ಧೃಡಗೊಂಡಿದೆ. ಮುಂಬೈನಿಂದ ಆಗಮಿಸಿದವರಿಂದ ಕೂಡಗಿ ಉಷ್ಣ ವಿದ್ಯತ್ ಸ್ಥಾವರದಲ್ಲಿ ಕೊರೊನಾ ಹರಡಿದೆ. 3500 ಕ್ಕೂ ಆಧಿಕ ಸಿಬ್ಬಂದಿ ಕೆಲಸ ಮಾಡುತ್ತಿರುವ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಈ ಘಟನೆಯಿಂದ ಎಚ್ಚೆತ್ತ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಈ ಪೈಕಿ ಸಂಶಯಾಸ್ಪದ ಒಮಿಕ್ರಾನ್ ಪ್ರಕರಣಗಳ ಪರೀಕ್ಷೆಗೆ ಕ್ರಮ ವಹಿಸಿ
18 ಜನ ಪಾಸಿಟಿವ್ ಪೀಡಿತರ ಗಂಟಲು ದ್ರವ ಬೆಂಗಳೂರಿಗೆ ರವಾನಿಸಲಾಗಿದೆ. ಜಿನೋಮ್ ಸಿಕ್ವೆನ್ಸಿಂಗ್ ಟೆಸ್ಟ್ ಗೆ ರವಾನಿಸಲಾಗಿದೆ. ಟೆಸ್ಟ್ ವರದಿ ಬಂದ ಬಳಿಕ ಒಮಿಕ್ರಾನ್ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.