Vijaypura

ಪ್ರಧಾನಿ ನಮೋ ಆಯರ್,ಆರೋಗ್ಯ ಆಯಸ್ಸಿಗಾಗಿ ಮೃತ್ಯುಂಜಯ ಮಂತ್ರ ಪಠಿಸಿದ ಬಿಜೆಪಿ ಕಾರ್ಯಕರ್ತರು

Share

ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರಿಗೆ ದೇವರು ಆಯುರ್, ಆರೋಗ್ಯ, ಆಯಸ್ಸಿಗಾಗಿ ಪೂಜೆಯನ್ನು ವಿಜಯಪುರ ಜಿಲ್ಲಾ ಬಿಜೆಪಿ ಘಟಕದಿಂದ ಆಯೋಜಿಸಲಾಗಿತ್ತು. ನಗರದ ಜೋರಾಪುರ ಪೇಠದಲ್ಲಿರುವ ಶ್ರೀ ಶಂಕರಲಿಂಗ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹಾಗೂ ಬೀಜ ಮತ್ತು ಸಾವಯವ ಪ್ರಮಾಣನ ನಿಗಮದ ಅಧ್ಯಕ್ಷ ಹಾಗೂ ಬಬಲೇಶ್ವರ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ನೇತೃತ್ವದಲ್ಲಿ ಪೂಜೆ ಸಲ್ಲಿಸಿದ ಕಾರ್ಯಕರ್ತರು ಹಾಗೂ ಮಹಿಳಾ ಕಾರ್ಯಕರ್ತರು ಸಾಮೂಹಿಕ ಶ್ರೀಮೃತ್ಯುಂಜಯ ಮಂತ್ರವನ್ನು ಪಠಿಸಿದರು. ಶ್ರೀ ಶಂಕರಲಿಂಗ ದೇವಸ್ಥಾನದಲ್ಲಿ ನಡೆದ ಪೂಜೆ ಹಾಗೂ ಮಂತ್ರ ಪಠಣೆ ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕರು ಮಂತ್ರ ಬೋಧಿಸಿದರು.

ಇತ್ತಿಚೆಗೆ ಪಂಜಾಬ್ ದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭದ್ರತೆಯಲ್ಲಿ ಲೋಪ ಕಂಡುಬಂದಿತ್ತು. ಬಿಜೆಪಿ ಪಕ್ಷವು ಇದನ್ನು ಹತ್ಯೆ ಸಂಚು ಎಂದು ಖಂಡಿಸಿತ್ತು. ಅಲ್ಲದೇ ನಿನ್ನೆ ಸಾಯಂಕಾಲ ಕಾಂಗ್ರೆಸ್ ವಿರುದ್ದ ಪಂಜಿನ ಮೆರವಣಿಗೆ ನಡೆಸಿ ಕಾಂಗ್ರೆಸ್ ನಾಯಕರ ಪ್ರತಿಕೃತಿ ದಹಿಸಿದ್ದರು. ಮುಂದುವರೆದು ಇಂದು ಶಂಕರಲಿಂಗ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಪ್ರಕಾಶ ಅಕ್ಕಲಕೋಟ, ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ, ಗುರು ಗಚ್ಚಿನಮಠ, ಮಳುಗೌಡ ಪಾಟೀಲ, ಕೃಷ್ಣಾ ಗುನ್ಹಾಳಕರ, ಶ್ರೀಮತಿ ಭಾರತಿ ಭುಯ್ಯಾರ, ಗೀತಾ ಕೊಗನೂರು, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರಾಹುಲ್ ಜಾಧವ, ರಾಜೇಶ ದೇವಗಿರಿ ಸೇರಿದಂತೆ ಮಾದ್ಯಮ ವಕ್ತಾರ ವಿಜಯ ಜೋಶಿ
ಉಪಸ್ಥಿತರಿದ್ದರು.

Tags:

error: Content is protected !!