ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ವೇಳೆ ಪಂಜಾಬ್‍ನಲ್ಲಿ ಭದ್ರತಾಲೋಪ ಖಂಡಿಸಿ ಪಂಜಾಪ್ ಕಾಂಗ್ರೆಸ್ ಸರಕಾರದ ವಿರುದ್ಧ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಪಂಜಾಬ್‍ದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ಮೇಲೆ ಪಂಜಾಬ್ ಸರಕಾರದ ಭದ್ರತಾ ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಟ್ರಾಫಿಕ್ ಜ್ಯಾಂ ನಲ್ಲಿ ಸಿಲುಕಿಕೊಳ್ಳಬೇಕಾಯಿತು. ಹಾಗಾಗಿ ಇದು ಪಂಜಾಬಿನ ಕಾಂಗ್ರೆಸ್ ಸರಕಾರದ ಭದ್ರತಾ ಲೋಪವೇ ಇದಕ್ಕೆ ಕಾರಣ ಎಂದು ಬೆಳಗಾವಿಯಲ್ಲಿ ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರು ನಪ್ರತಿಭಟನೆ ನಡೆಸಿದ್ದಾರೆ. ಚೆನ್ನಮ್ಮ ವೃತ್ತದಿಂದ ಕಾಂಗ್ರೆಸ್ ಭವನದ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅಣಕು ಶವಯಾತ್ರೆ ಮಾಡಿದ ಪ್ರತಿಭಟನಾಕಾರರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಹಾಗಾಗಿ ಪೂರ್ವನಿಯೋಜಿತವಾಗಿ ಕಾಂಗ್ರೆಸ್ ಕಚೇರಿ ಬಳಿ ಹೆಚ್ಚಿನ ಪೆÇಲೀಸ್ ಬಂದೋಬಸ್ತ ನಿಯೋಜಿಸಲಾಗಿತ್ತು.
ಇನ್ನು ಪ್ರತಿಭಟನಾಕಾರರು ಕಾಂಗ್ರೆಸ್ ಭವನದತ್ತ ಬರುತ್ತಿದ್ದಂತೆ ಪ್ರತಿಭಟನಾಕಾರರನ್ನು ರಸ್ತೆ ಮಧ್ಯದಲ್ಲಿ ಪೆÇಲೀಸರು ತಡೆದಿದ್ದಾರೆ. ಈ ವೇಳೆ ಪೆÇಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನೂಕುನುಗ್ಗಲು ಉಂಟಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕಿ ಉಜ್ವಲಾ ಬಡವನಾಚೆ, ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ಪ್ರವಾಸದ ವೇಳೆ ಈ ರೀತಿ ಭದ್ರತಾ ಲೋಪ ಮಾಡಿರುವುದು ಇದೀ ದೇಶಕ್ಕೇ ಅವಮಾನಕರ ಸಂಗತಿಯಾಗಿದೆ. ಇದರ ನೈತಿಕ ಹೊಣೆಹೊತ್ತು ಪಂಜಾಬ್ ಮುಖ್ಯಮಂತ್ರಿ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು ದೇಶದ ಹೆಮ್ಮೆಯ ಪ್ರಧಾನಿಗಳ ಪ್ರತಿಯೊಂದು ನಡೆಯನ್ನು ಇಂದು ಇಡೀ ವಿಶ್ವವೇ ಗಮನಿಸುತ್ತಿದೆ. ಇಂಥಹ ಸಂದರ್ಭದಲ್ಲಿ ಪಂಜಾಬಿನಲ್ಲಾದ ಭದ್ರತಾ ಲೋಪ ಇಂದು ದೇಶದ ಗೌರವಕ್ಕೆ ಚ್ಯುತು ತಂದಂತಾಗಿದೆ. ಇನ್ನು ಮುಂದೆಯಾದರೂ ಎಚ್ಚೆತ್ತುಕೊಂಡು ಈರೀತಿ ಆಗದಂತೆ ಎಚ್ಚರ ವಹಿಸಲಿ ಎನ್ನುವುದು ಎಲ್ಲರ ಆಶಯ