Banglore

ಹೊಸ ವರ್ಷಕ್ಕೆ ಕಂದಾಯ ಇಲಾಖೆಯಿಂದ ಸಿಹಿಸುದ್ದಿ: ಸಚಿವ ಆರ್.ಅಶೋಕ್

Share

ರೆವಿನ್ಯೂ ಮನೆಯ ಗೈಡೆನ್ಸ್ ವ್ಯಾಲ್ಯೂ ಶೇ.10ರಷ್ಟು ಕಡಿಮೆಗೊಳಿಸಿ ಕರ್ನಾಟಕ ಸರ್ಕಾರ ಹೊಸ ವರ್ಷಕ್ಕೆ ಗುಡ್ ನ್ಯೂಸ್ ಕೊಟ್ಟಿದೆ. ಕಂದಾಯ ಇಲಾಖೆಯಿಂದ ಹೊಸ ವರ್ಷದ ಗಿಫ್ಟ್ ನೀಡಲು ನಿನ್ನೆ ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆಸ್ತಿ ವಹಿವಾಟು ರೆವಿನ್ಯೂ ಮನೆಯ ಗೈಡೆನ್ಸ್ ವ್ಯಾಲ್ಯೂ ಶೇ.10ರಷ್ಟು ಕಡಿಮೆ ಮಾಡಲಾಗುತ್ತದೆ. ಕೇವಲ 3 ತಿಂಗಳು ಮಾತ್ರ ಅವಕಾಶ ನೀಡಲಾಗಿದೆ ಎಂದು ಸಚಿವ ಆರ್.ಆಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಆರ್.ಅಶೋಕ್ ಜಿಪಿಎ, ಅಗ್ರಿಮೆಂಟ್ ಮಾಡಿಕೊಂಡವರಿಗೆ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು ಅಂತಿದ್ದವರಿಗೆ 10 ಪಸೆರ್ಂಟ್ ಡಿಸ್ಕೌಂಟ್ ಮಾಡಲಾಗಿದೆ. ರಾಜ್ಯಾದ್ಯಂತ ಶೇ.10ರಷ್ಟು ಗೈಡೆನ್ಸ್ ವ್ಯಾಲ್ಯೂ ಡಿಸ್ಕೌಂಟ್ ಕೊಡಲಾಗಿದೆ. ಜಮೀನು, ಸೈಟು, ಫ್ಲಾಟ್ ಯಾವುದೇ ಖರೀದಿಸಿದರು 10 ಪಸೆರ್ಂಟ್ ಕಡಿಮೆ ಮಾಡಿದ್ದೇವೆ. ಇವತ್ತಿನಿಂದ ಇದು ಅನ್ವಯವಾಗಲಿದೆ ಎಂದು ಮಹತ್ವದ ಮಾಹಿತಿ ನೀಡಿದರು.

Tags:

error: Content is protected !!