ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ನಡುವೆ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಹುಬ್ಬಳ್ಳಿ ಜಿಮಖಾನಾ ಮೈದಾನದಲ್ಲಿ ಹಮ್ಮಿಕೊಳ್ಳಲಾಯಿತು.

ಮೀಡಿಯಾ ಇಲೆವೆನ್ ಹಾಗೂ ಕಮೀಷನರೇಟ್ ಇಲೆವೆನ್ ತಂಡದ ನಡುವೆ ಬಾರಿ ಪಂದ್ಯ ನಡೆದಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಮೀಡಿಯಾ ಇಲೆವೆನ್ ತಂಡ 12 ಓವರ್ ನಲ್ಲಿ 8 ವಿಕೆಟ್ ಪತನಕ್ಕೆ 79 ರನ್ ಕಲೆ ಹಾಕಿತು. ಬಳಿಕ ಪೊಲೀಸ್ ಕಮೀಷನರೇಟ್ ತಂಡ ದೊಡ್ಡ ರನ್ ಮೊತ್ತವನ್ನು ಹಿಮ್ಮೆಟ್ಟಿಸಲು ಹರಸಾಹಸ ನಡೆಸಿದೆ. ಈಗಾಗಲೇ ಎಲ್ಲ ಆಟಗಾರರು ಉತ್ಸುಕತೆಯಿಂದ ಆಟವನ್ನು ಆರಂಭಿಸಿದ್ದು, ಗೆಲುವು ಯಾರ ಮುಡಿಗೆ ಸೇರಲಿದೆ ಎಂಬುವಂತ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿದೆ.
ಖಾಕಿ ಬಟ್ಟೆ ಧರಿಸಿ ಸಾರ್ವಜನಿಕ ಸೇವೆಗೆ ನಿಂತಿರುವ ಪೊಲೀಸ್ ಸಿಬ್ಬಂದಿ ಒಂದುಕಡೆ ಆದರೇ ಮತ್ತೊಂದು ಕಡೆಗೆ ಪ್ರಜಾಪ್ರಭುತ್ವದ ನಾಲ್ಕನೇ ಕಂಬ ಎಂಬುವಂತ ಮಾಧ್ಯಮ ಮತ್ತೊಂದು ಕಡೆಯಲ್ಲಿ ಆಟವನ್ನು ಆಡುತ್ತಿದ್ದು, ಪೊಲೀಸ್ ಆ್ಯಂಡ್ ಪ್ರೆಸ್ ಆಟ ಎಲ್ಲರಲ್ಲಿಯೂ ವಿಶೇಷ ಆತ್ಮವಿಶ್ವಾಸ ಹುಟ್ಟು ಹಾಕಿದೆ