ಗಡಿಭಾಗ ಅಭಿವೃದ್ಧಿ ಯಾಗಬೇಕು ಎಂದು ಕುಳಿತರೆ ಸಾಲದು, ಪ್ರತಿಯೊಬ್ಬರು ಗಡಿಯ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡು ಎಲ್ಲರೂ ಹೊಂದಾನಿಕೆಯಿಂದ ನಡೆದಾಗ ಮಾತ್ರ ಗಡಿಭಾಗ ಅಭಿವೃದ್ಧಿಯಾಗಲು ಸಾಧ್ಯ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ ಸೋಮಶೇಖರ್ ಅವರು ಹೇಳಿದರು. ಅವರು ಹುಕ್ಕೇರಿ ಹಿರೇಮಠ ದಿಂದ ನಡೆಯುತ್ತಿರುವ ಅಕ್ಷರ ದಾಸೋಹ ಕೇಂದ್ರಕ್ಕೆ ಭೇಟಿ ನೀಡಿ ಪರಿಸಿಲಿಸಿ ಮೇಚ್ಚಿಗೆ ವ್ಯಕ್ತ ಪಡಿಸಿದರು.

ನಂತರ ಚಂದ್ರಶೇಖರ ಮಹಾಸ್ವಾಮಿಗಳಿಂದ ಆಶಿರ್ವಾದ ಪಡೆದು ಮಾತನಾಡುತ್ತ ಗಡಿಭಾಗದ ಹುಕ್ಕೇರಿ , ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಸುಮಾರು 60ಸಾವಿರ ಮಕ್ಕಳಿಗೆ ದಾಸೋಹ ವದಗಿಸುವ ಕಾರ್ಯ ಹುಕ್ಕೇರಿ ಶ್ರೀ ಗಳು ಅಚ್ಚು ಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ ಸಮಾಜ ಸುಧಾರಣೆಯೊಂದಿಗೆ ಶೈಕ್ಷಣಿಕವಾಗಿ ,ಧಾರ್ಮಿಕವಾಗಿ ಶ್ರೀ ಗಳ ಕಾರ್ಯ ಅನನ್ಯವಾಗಿದೆ ಎಂದರು .ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ ಗಡಿನಾಡಿನ ಕುರಿತು ಮಾತನಾಡಿದರು. ಸಹಾಯಕ ಕಾರ್ಯದರ್ಶಿ ಸೋಮಶೇಖರ ಗಾಂಜಿ ಸೇರಿದಂತೆ ಇತರರು ಇದ್ದರು.