Hukkeri

ಹುಕ್ಕೇರಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಕಾರ್ಯಾಗಾರ

Share

ಹುಕ್ಕೇರಿ ಪುರಸಭೆ ಕಾರ್ಯಾಲಯದಲ್ಲಿ ದೀನ ದಯಾಳ ಅಂತ್ಯೋದಯ ಯೋಜನೆ ಡೇ-ನಲ್ಮ ಅಭಿಯಾನದಡಿ ಬೀದಿ ಬದಿ ವ್ಯಾಪಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಜರುಗಿತು.

ಪುರಸಭೆ ಕಾರ್ಯಾಲಯ ಸಭಾಂಗಣದಲ್ಲಿ ಜರುಗಿದ ಕಾರ್ಯಾಗಾರವನ್ನು ಪುರಸಭೆ ಅಧ್ಯಕ್ಷ ಅಣ್ಣಪ್ಪಾ ಪಾಟೀಲ ಸಸಿಗೆ ನೀರು ಹಾಕುವ ಮೂಲಕ ಚಾಲನೆ ಮಾಡಿದರು. ವೇದಿಕೆ ಮೇಲೆ ಗ್ರೇಡ 2 ತಹಶೀಲ್ದಾರ್ ಕಿರಣ ಬೆಳಗಾವಿ. ಉಪಾಧ್ಯಕ್ಷ ಆನಂದ ಗಂಧ ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ್. ನ್ಯಾಯವಾದಿ ಅನೀಸ್ ವಂಟಮುರಿ, SಃI ವ್ಯಾವಸ್ಥಾಪಕ ಜಗದೀಶ್ ಕುಮಾರ್. ತಜ್ಞ ಸಂಪನ್ಮೂಲ ವ್ಯಕ್ತಿಗಳಾದ ಡಾ.ಉದಯ ಕುಡಚಿ, ಸಮುದಾಯ ಸಂಘಟನಾಧಿಕಾರಿ ಗೀತಾ ಕಾಗತಿಕರ ಉಪಸ್ಥಿತರಿದ್ದರು. ಒಂದು ದಿನದ ಕಾರ್ಯಾಗಾರ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿಗಳಾದ ಡಾ.ಉದಯ ಕುಡಚಿ ಉಪನ್ಯಾಸ ನೀಡುತ್ತಾ ಕೊರೊನಾ ಸಮಯದಲ್ಲಿ ಬೀದಿ ಬದಿಯ ವ್ಯಾಪಾರಿಗಳು ಮಾಸ್ಕ್ ಮತ್ತು ಸ್ಯಾನಿಟೈಜರ್ ಬಳಸಿ ಅಂತರ ಕಾಪಾಡಿಕೊಂಡು ವ್ಯಾಪಾರ ಮಾಡಬೇಕು ಎಂದರು.

ಗ್ರೇಡ-2 ತಹಶೀಲ್ದಾರ್ ಕಿರಣ ಬೆಳವಿ ಮಾತನಾಡಿ ಸಾಮಾಜಿಕ ಭದ್ರತೆ ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಸಿಗುವ ಯೋಜನೆ ಮತ್ತು ಅವುಗಳ ಉಪಯೋಗ ಕುರಿತು ಮಾಹಿತಿ ನೀಡಿದರು.

ನಂತರ SಃI ಬ್ಯಾಂಕ್ ವ್ಯವಸ್ಥಾಪಕ ಜಗದೀಶ್ ಕುಮಾರ್ ಮಾತನಾಡುತ್ತಾ ಬೀದಿ ಬದಿಯ ವ್ಯಾಪಾರಸ್ಥರು ಮೊದಲು ಬ್ಯಾಂಕ್ ಖಾತೆ ತೆರೆದ ಮೇಲೆ ಸರ್ಕಾರದ ನಿಯಮಗಳ ಪ್ರಕಾರ 20 ಸಾವಿರ ರೂಗಳ ಸಾಲವನ್ನು ನೀಡಲಾಗುವದು ಅದರ ಉಪಯೋಗ ಮಾಡಿಕೊಂಡು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದ ಬೀದಿ ಬದಿ ವ್ಯಾಪಾರಿಗಳಿಗೆ ಇನ್ನೂ ಹೆಚ್ಚಿನ ಸಾಲವನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಹುಕ್ಕೇರಿ ಪಟ್ಟಣದ ಬೀದಿ ಬೀದಿಯ ವ್ಯಾಪರಾಸ್ಥರು ಉಪಸ್ಥಿತರಿದ್ದರು.

Tags:

error: Content is protected !!