ವಾಸ್ಕೋ ಹಾಗೂ ಹೌರಾ ಮಧ್ಯೆ ಸಂಚರಿಸುವ ಅಮರಾವತಿ ರೈಲು ಹಳಿತಪ್ಪಿದ್ದು ಕೊಂಚ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.

ವಾಸ್ಕೋ ಹಾಗೂ ಹೌರಾ ಮಧ್ಯೆ ಸಂಚರಿಸುವ ಅಮರಾವತಿ ರೈಲು ಹಳಿತಪ್ಪಿದೆ. ಬೆಳಗ್ಗೆ 6.30ಕ್ಕೆ ವಾಸ್ಕೊದಿಂದ ಹೊರಟ್ಟಿದ್ದ ಅಮರಾವತಿ ಎಕ್ಸ್‍ಪ್ರೆಸ್, ಗೋವಾದ ದೂಧ್‍ಸಾಗರ- ಕಾರಂಜೋಲ್ ಮಾರ್ಗ ಮಧ್ಯದ ಕಾರಂಜೋಲ್ ಬಳಿ ಹಳಿ ರೈಲಿನ ಮುಂಭಾಗದ ಚಕ್ರಗಳು ಹಳಿ ತಪ್ಪಿವೆ. ಅದೃಷ್ಟವಶಾತ್ ಲೋಕೋಪೈಲೇಟ್ ಚಾಣಾಕ್ಷತನದಿಂದ ಭಾರೀ ದುರಂತ ತಪ್ಪಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಅಪಘಾತ ಪರಿಹಾರ ರೈಲು ಆಗಮಿಸಿತು. ರೈಲಿನಲ್ಲಿದ್ದ ಪ್ರಯಾಣಿಕರಿಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟ ಪೂರೈಕೆ ಮಾಡಲಾಗಿದೆ. ಈ ವೇಳೆ ಬೇರೆ ಇಂಜಿನ್ ಸಹಾಯದಿಂದ ಅಮರಾವತಿ ಎಕ್ಸ್‍ಪ್ರೆಸ್ ತನ್ನ ಮರು ಪ್ರಯಾಣವನ್ನು ಆರಂಭಿಸಿದೆ. ಹಾಗಾಗಿ ಇದೇ ಮಾರ್ಗದಲ್ಲಿ ಸಂಚರಿಸಬೇಕಿದ್ದ ಎರ್ನಾಕುಲಂ-ಪುಣೆ ಎಕ್ಸ್‍ಪ್ರೆಸ್ ರೈಲು ಸಂಚಾರದಲ್ಲಿ ವಿಳಂಬವಾಗಿದೆ.