Banglore

ಸ್ಟಾರ್ಟ್ ಅಪ್‍ನಲ್ಲಿ ಕರ್ನಾಟಕ ಭರವಸೆಯ ರಾಜ್ಯವಾಗಿ ಹೊರಹೊಮ್ಮಲಿದೆ: ಸಚಿವ ಡಾ.ಅಶ್ವತ್ಥನಾರಾಯಣ

Share

ರಾಜ್ಯದಲ್ಲಿ ನೂತನ ಸ್ಟಾರ್ಟ್ ಅಪ್ ಪಾಲಿಸಿ ತಂದಿದ್ದೇವೆ. ಸ್ಟಾರ್ಟ್ ಅಪ್ ಕ್ಯಾಪಿಟಲ್ ಬೆಳೆಸಲು ಪ್ರಯತ್ನ ಕೂಡ ನಡೆಯುತ್ತಿದೆ. ಇದರಿಂದ ಕರ್ನಾಟಕ ಭರವಸೆಯ ರಾಜ್ಯವಾಗಿ ಹೊರಹೊಮ್ಮಲಿದೆ. ಮುಂದಿನ ರಾಷ್ಟ್ರೀಯ ಯುವ ದಿನಾಚರಣೆ ವೇಳೆಗೆ ಮತ್ತಷ್ಟು ಅಭಿವೃದ್ಧಿ ಸಾಧ್ಯ ಎಂದು ಐಟಿಬಿಟಿ ಸಚಿವ ಡಾ.ಅಶ್ವತ್ಥ್ ನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜನವರಿ 16 ರಾಷ್ಟ್ರೀಯ ನವೋದ್ಯಮ ದಿನ ಹಿನ್ನೆಲೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಡಾ.ಅಶ್ವತ್ಥ್ ನಾರಾಯಣ ಪ್ರಧಾನಿ ಮೋದಿ ಕರ್ನಾಟಕದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸ್ಟಾರ್ಟ್ ಅಪ್ ರಾಜಧಾನಿ ಕರ್ನಾಟಕ ಎಂದು ಪ್ರಶಂಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಇಂದು ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನ ಎಂದು ಘೋಷಿಸಿದ್ದಾರೆ. ಮುಖ್ಯವಾಗಿ ಸ್ನೇಹಮಯವಾಗಿ ನಡೆಸಬೇಕಾಗಿರುವ ಇಲಾಖೆ ಐಟಿಬಿಟಿ. ರಾಜ್ಯಕ್ಕೆ 2020-21ರಲ್ಲಿ 1.60 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗಿದೆ. 46 ಸ್ಟಾರ್ಟ್ ಅಪ್‍ಗಳ ಪೈಕಿ ರಾಜ್ಯದ 13 ಕಂಪನಿಗೆ ಬಹುಮಾನ ನೀಡಲಾಗಿದೆ. 75 ಸ್ಟಾರ್ಟ್ ಅಪ್‍ಗಳಿಗೆ ಅಮೃತ ಯೋಜನೆಯಡಿ ಫಂಡ್ ನೀಡಲಾಗಿದೆ. ಈ ವರ್ಷ 200 ಸ್ಟಾರ್ಟ್ ಅಪ್ ಕಂಪನಿಗಳಿಗೆ ಸೀಡ್ ಫಂಡ್ ಕೊಟ್ಟಿದ್ದೇವೆ. 50 ಲಕ್ಷ ರೂಪಾಯಿವರೆಗೆ ಸೀಡ್ ಫಂಡ್ ಕೊಡುತ್ತೇವೆ ಎಂದರು.

ಇನ್ನು ಅಮೇರಿಕಾ, ಚೈನಾ ಬಳಿಕ ಅತಿ ಹೆಚ್ಚಿನ ಸ್ಟಾರ್ಟ್ ಅಪ್ ಯುನಿಕಾರ್ನ್ ಇರೋದು ಭಾರತದಲ್ಲಿ. ರಾಜ್ಯದಲ್ಲಿ ಕೂಡ ಉತ್ತಮ ತಂತ್ರಜ್ಞಾನದ ಆವಿμÁ್ಕರಗಳು ಆಗುತ್ತಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ರಾಜ್ಯದಲ್ಲಿ ನೂತನ ಸ್ಟಾರ್ಟ್ ಅಪ್ ಪಾಲಿಸಿ ತಂದಿದ್ದೇವೆ. ಸ್ಟಾರ್ಟ್ ಅಪ್ ಕ್ಯಾಪಿಟಲ್ ಬೆಳೆಸಲು ಪ್ರಯತ್ನ ಕೂಡ ನಡೆಯುತ್ತಿದೆ. ಇದರಿಂದ ಕರ್ನಾಟಕ ಭರವಸೆಯ ರಾಜ್ಯವಾಗಿ ಹೊರಹೊಮ್ಮಲಿದೆ. ಮುಂದಿನ ರಾಷ್ಟ್ರೀಯ ಯುವ ದಿನಾಚರಣೆ ವೇಳೆಗೆ ಮತ್ತಷ್ಟು ಅಭಿವೃದ್ಧಿ ಸಾಧ್ಯ ಎಂದರು.

Tags:

error: Content is protected !!