ಕಾಲೇಜಿನಲ್ಲಿ ಸ್ಕಾಲರ್‌ಶೀಪ್ ತೆಗೆದುಕೊಂಡು ಬರುತ್ತೇನೆ ಎಂದು ಬೆಳಗಾವಿಗೆ ಬಂದಿದ್ದ ಮಣ್ಣಿಕೇರಿ ಗ್ರಾಮದ ಯುವತಿ ಓರ್ವಳು ನಾಪತ್ತೆಯಾಗಿರುವ ಘಟನೆ ನಡೆದಿದೆ.

ಹೌದು ಮಣ್ಣಿಕೇರಿ ಗ್ರಾಮದ ೨೨ ವರ್ಷದ ಶೃತಿ ರಾಮಾ ಖಜಗೋನಟ್ಟಿ ಕಾಣೆಯಾಗಿರುವ ಯುವತಿ. ಇದೇ ಜನವರಿ ೫ರಂದು ಬೆಳಿಗ್ಗೆ ೧೦ ಗಂಟೆಗೆ ಕಾಲೇಜಿಗೆ ಹೋಗಿ ಸ್ಕಾಲರ್‌ಶಿಪ್ ತೆಗೆದುಕೊಂಡು ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋದವಳು ಮರಳಿ ಮನೆಗೆ ಬಂದಿಲ್ಲ. ಈ ಸಂಬAಧ ಕಾಣೆಯಾಗಿರುವ ಯುವತಿ ತಂದೆ ರಾಮಾ ಯಶವಂತ ಖಜಗೋನಟ್ಟಿ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಾಪತ್ತೆಯಾಗಿರುವ ಶೃತಿ ೫ ಫೂಟ್ ಎತ್ತರವಿದ್ದು, ಬಣ್ಣ ಸಾದಾಗಪ್ಪು, ಮೈಯಿಂದ ಸದೃಢ, ಗುಂಡು ಮುಖ, ಸಾಧಾರಣ ಮಂಡ ಮೂಗು ಇದ್ದು, ಬಲಗೈ ಮುಂಗೈ ಮೇಲೆ ಹಳೆ ಗಾಯದ ಕಲೆ ಇರುತ್ತದೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಹೂವಿನ ಡಿಜೈನ್ ಇದ್ದ ಚೂಡಿದಾರ್ ಟಾಪ್, ಬಿಳಿ ಬಣ್ಣದ ಲೆಗ್ಗಿನ್ಸ ಧರಿಸಿದ್ದರು. ಈ ಯುವತಿ ಬಗ್ಗೆ ಯಾರಿಗಾದರೂ ಗುರುತು ಸಿಕ್ಕರೆ ತಮಗೆ ಮಾಹಿತಿ ನೀಡುವಂತೆ ಕಾಕತಿ ಠಾಣೆ ಪೊಲೀಸರು ತಿಳಿಸಿದ್ದಾರೆ.