Belagavi

ಸೇವೆಯನ್ನು ಖಾಯಂಗೊಳಿಸುವಂತೆ ಪಾಲಿಕೆ ನೌಕರರ ಸಭೆ

Share

ಪಾಲಿಕೆ ಒಪ್ಪಂದದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಖಾಯಂಗೊಳಿಸಿ ಆದೇಶ ಹೊರಡಿಸಬೇಕೆಂದು ಬೆಳಗಾವಿಯ ಪಾಲಿಕೆ ವಾಲ್‍ಮನ್ ಗಳು ಸಭೆ ನಡೆಸಿದರು.

ಬೆಳಗಾವಿಯ ಕಂಗ್ರಾಳಿಯಲ್ಲಿ ಇಂದು ಶುಕ್ರವಾರ ಸಭೆ ಸೆರಿದ ವಾಲ್‍ಮನ್‍ಗಳು ಈಗಾಗಲೇ ಕಳೆದ ಅನೇಕ ವರ್ಷಗಳಿಂದ ಬೆಳಗಾವಿ ಪಾಲಿಕೆಯಲ್ಲಿ ಒಪ್ಪಂದದ ಆಧಾರದ ಮೇಲೆ ನಾವೆಲ್ಲ ಕಾರ್ಯ ನಿರ್ವಹಿಸುತ್ತಿದ್ದೇವೆ. ಇನ್ನು ನಮ್ಮನ್ನು ಖಾಯಂ ಮಾಡಿಕೊಳ್ಳಬೇಕೆಂದು ಈಗಾಗಲೇ ನಾವು ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ ಅಧಿಕಾರಿಗಳು ಮಾತ್ರ ಹಾರಕಿ ಉತ್ತರಗಳನ್ನು ಕೊಡುತ್ತ ಬಂದಿದ್ದಾರೆ. ಈ ವರೆಗೂ ಈ ಕುರಿತಂತೆ ಯಾವುದೇ ಕೆಲಸವಾಗಿಲ್ಲ. ಹಾಗಾಗಿ ಇಂದು ಈ ಕುರಿತಂತೆ ಚರ್ಚೆ ನಡೆಸಲು ಎಲ್ಲಾ ವಾಲ್ಮನ್‍ಗಳು ಇಂದು ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಕೆಲಸಾರರು, ಈ ವಿಷಯವಾಗಿ ನಾವಿ ಪಾಲಿಕೆ ಕಮಿಶನರ್ ರವರಿಗೆ ತಿಳಿಸಿದಾಗ ನಮ್ಮ ಬಿಲ್ ಕಲೆಕ್ಟ್ ಆದ ಹಣದಲ್ಲಿಯೇ ಇದನ್ನು ಮಾಡಲು ಬರುತ್ತದೆ ಎಂದು ತಿಳಿಸಿದ್ದರು. ಆದರೆ ಈ ಕುರಿತು ಈಗ ಯಾವುದೇ ಮಾತು ಆಡುತ್ತಿಲ್ಲ. ನಮ್ಮೆಲ್ಲರ ಹಿತ ದೃಷ್ಟಿಯಿಂದ ಈ ಕೆಲಸ ಮಾಡಿಕೊಟ್ಟರೆ ಒಳ್ಳೆಯದಾಗುತೆ. ಇಲ್ಲವಾದರೆ ನಾವೆಲ್ಲ ಪೆಟ್ರೋಲ್ ಹಾಕಿಕೊಂಡು ಬೆಂಕಿ ಹಚ್ಚಿಕೊಳ್ಳಬೇಕಾಗುತ್ತದೆ. ಇದಕ್ಕೆ ಜಿಲ್ಲಾಡಳಿತ, ಪಾಲಿಕೆ ಹಾಗೂ ಜನಪ್ರತಿನಿಧಿಗಳೇ ಇದಕ್ಕೆ ಕಾರಣರಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಇನ್ನೋರ್ವ ಕೆಸಗಾರರು, ಮೈಸೂರು ಮಹಾನಗರ ಪಾಲಿಕೆಯಲ್ಲಿ 2012ರಿಂದಲೇ ನೇಮಕಾತಿ ಮಾಡಿದ್ದಾರೆ. ಹಾಗಾಗಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆಲ್ಲ ನಾವು ಹೇಳುತ್ತಿದೇವೆ. ಕಳೆದ 5ವರ್ಷಗಳಿಂದ ಎಲ್ಲಾ ಅಧಿಕಾರಿಗಳಿಗೆ ನಾವು ಮನವಿ ಮಾಡಿದ್ದೇವೆ. ಆದರೆ ಯಾವುದೇ ರೀತಿಯ ಕೆಲಸವಾಗಿಲ್ಲ. ಹಾಗಾಗಿ ಅಧಿಕಾರಿಗಳು ಕೂಡಲೇ ಈ ಕಾರ್ಯವನ್ನು ಮಾಡಿಕೊಡಬೇಕೆಂದು ಮನವಿ ಮಾಡಿದರು.

ಪಾಲಿಕೆಯಲ್ಲಿ ಒಪ್ಪಂದದ ಆದಾರದ ಮೇಲೆ ಕೆಲಸ ಮಾಡುವ ಈ ವಾಲ್ಮನ್‍ಗಳು ತಮ್ಮೆ ಸೇವಾ ಜೇಷ್ಠತೆಯನ್ನು ಪರಿಗಣಿಸಿ ತಮ್ಮ ಸೇವೆಯನ್ನು ಖಾಯಂ ಮಾಡಬೇಕೆಂದು ಕಳೆದ 5ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಇನ್ನು ಈ ಕುರಿತಂತೆ ಪಾಲಿಕೆ ಅಧಿಕರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

 

Tags:

error: Content is protected !!