ಬೆಳಗಾವಿ ನಗರದಲ್ಲಿ ಸೇಂಟ್ ಪಾಲ್ ರ ತತ್ವಶಾಸ್ತ್ರದಲ್ಲಿನ ಸಮಸ್ಯೆಗಳು ಎಂಬ ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಬೆಳಗಾವಿ ನಗರದ ಅಕಾಡೆಮಿ ಆಫ್ ಕಂಪೇರಿಟಿವ್ ಫಿಲಾಸಫಿ ಮತ್ತು ರಿಲಿಜನ್ ಗುರುದೇವ ರಾನಡೆ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಅಶೋಕ ಡಿಸೋಸಾ ಹಾಗೂ ವೇದಿಕೆಯ ಮೇಲಿದ್ದ ಗಣ್ಯರು ಪುಸ್ತಕ ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಸಂಸದೆ ಮಂಗಲಾ ಅಂಗಡಿ, ವಕೀಲರಾದ ಪ್ರಭು ಯತ್ನಟ್ಟಿ, ಸಚಿನ್ ಶಿವಣ್ಣವರ್, ಸುಧೀರ್ ಚೌವ್ಜಾಣ್, ಗಿರಿರಾಜ ಪಾಟೀಲ್, ಎಸಿಪಿಆರ್ ಅಧ್ಯಕ್ಷರಾದ ಅಶೋಕ ಪೋತದಾರ್, ನ್ಯಾಯವಾದಿಗಳು ಹಾಗೂ ಅನೇಕ ಸಾರ್ವಜನಿಕರು ಕೂಡ ಉಪಸ್ಥಿತರಿದ್ದರು