Politics

ಸುದ್ದಿಗೋಷ್ಠಿಯಲ್ಲಿಯೇ ಸಚಿವ-ಸಂಸದರು ಮಂತ್ರಿಯೊಬ್ಬರ ಬಗ್ಗೆ ಗುಸುಗುಸು..!

Share

ಸುದ್ದಿಗೋಷ್ಠಿಯಲ್ಲಿಯೇ ಸಚಿವ ಭೈರತಿ ಬಸವರಾಜ್ ಹಾಗೂ ಸಂಸದ ಜಿ.ಎಸ್ ಬಸವರಾಜ್ ಸಚಿವರೊಬ್ಬರ ಕುರಿತಂತೆ ಗುಸುಗುಸು ಮಾತನಾಡಿದ್ದಾರೆ.
ತುಮಕುರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಭೈರತಿ ಬಸವರಾಜ್ ಹಾಗೂ ಸಂಸದ ಜಿ.ಎಸ್ ಬಸವರಾಜ್ ಮೆಲು ಧ್ವನಿಯಲ್ಲಿಯೇ ಮಾತನಾಡಿದ್ದಾರೆ. ಈ ನನ್ನ ಮಗ ಮಂತ್ರಿ ಹೆಂಗೆ ಗೊತ್ತಾ, ದಕ್ಷಿಣ ಕೋರಿಯಾ ಕಿಂಗ್ ಪಿನ್ ಇದ್ದಾನಲ್ಲ ಆ ರೀತಿ ಎಂದು ಸಂಸದರು ಪತ್ರಿಕಾ ಗೋಷ್ಟಿಯಲ್ಲಿ ಸಚಿವರೊಂದಿಗೆ ಮಾತನಾಡಿದ ದೃಶ್ಯ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಓಈ ವೇಳೆ ಸುಮ್ಮನಿರು ಆಮೇಲೆ ಮಾತನಾಡೋಣ ಎಂದು ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ. ಮಾತು ಎತ್ತಿದರೆ ಕಡಿ, ಹೊಡಿ ಬಡಿ ಅಂತಾನೆ, ಒಂದೂ ಸೀಟ್ ಬರಲ್ಲ ಎಂದು ಹೆಸರು ಹೇಳದೇ ಮಾಧುಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

Tags:

error: Content is protected !!