Chikkodi

ಸಿಎಂ ಬೊಮ್ಮಾಯಿ ಅವರು ನನಗೆ ಯಾವುದೇ ಆಶ್ವಾಸನೆ ಕೊಟ್ಟಿಲ್ಲ: ಮಹಾಂತೇಶ ‌ಕವಟಗಿಮಠ

Share

ಸಿಎಂ ಬಸವರಾಜ ಬೊಮ್ಮಾಯಿ ಅವರು ನನಗೆ ಯಾವುದೇ ಆಶ್ವಾಸನೆಯನ್ನ ಕೊಟ್ಟಿಲ್ಲ. ಎಲ್ಲವೂ ಊಹಾಪೋಹಗಳಷ್ಟೇ.ನಾನು ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರನಾಗಿ ಪಕ್ಷದ ನಾಯಕರು ಕೊಡುವ ಜವಾಬ್ದಾರಿ ನಿಭಾಯಿಸಲು ‌ಸಿದ್ಧನಿದ್ದೇನೆ ಎಂದು ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ‌ಕವಟಗಿಮಠ ಹೇಳಿದರು.

ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ 2023ರ ಸಾರ್ವತ್ರಿಕ ಚುನಾವಣೆ ಬಿಜೆಪಿಯಿಂದ ಟಿಕೆಟ್ ಕೇಳಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕವಟಗಿಮಠ, ಆ ತರದ ಯಾವ ನಿರ್ಣಯ ಇಲ್ಲ. ಸಿಎಂ ಬಸವರಾಜ ಬೊಮ್ಮಾಯಿಯವರು ನನಗೆ ಯಾವುದೇ ಆಶ್ವಾಸನೆ ಕೊಟ್ಟಿಲ್ಲ. ಎಲ್ಲವೂ ಊಹಾಪೋಹಗಳು. ನಾನು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಲ್ಲ‌.ನಾನು ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರನಾಗಿ ಕೆಲಸ ಮಾಡುತ್ತೇನೆ. ಪಕ್ಷದ ನಾಯಕರು ಏನು ಜವಾಬ್ದಾರಿ ಕೊಡುತ್ತದೆ. ಅದನ್ನು ನಿಭಾಯಿಸಲು ‌ಸಿದ್ಧನಿದ್ದೇನೆ.ನಾನು ಯಾವುದೇ ಸ್ಥಾನಮಾನಗಳು ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದರು.

2019ರಲ್ಲಿ ಅತಿಯಾದ ಮಳೆ ಮತ್ತು ಪ್ರವಾಹಕ್ಕೆ ಹಾನಿಯಾದ ಸುಮಾರು 7,600 ಮನೆಗಳಿಗೆ 183 ಕೋಟಿ ಅನುದಾನವನ್ನು ಸಿಎಂ ಬಸವರಾಜ ಬೊಮ್ಮಾಯಿ‌ ಬಿಡಗಡೆ ಮಾಡಿದ್ದಾರೆ. 2019ರಲ್ಲಿ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ಹಾನಿಗೊಳಗಾದ ಮನೆಗಳ ಪರಿಹಾರ ಒದಗಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು.ಅದರಂತೆ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿಯವರು ಬೆಳಗಾವಿ ಜಿಲ್ಲೆಯಲ್ಲಿ 7.600ಮನೆಗಳಿಗೆ 183ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. 2019ರಲ್ಲಿ ಮಳೆಗೆ ಹಾನಿಯಾದ ಕುಟುಂಬಗಳಿಗೆ ಅನುದಾನದ ಬಿಡುಗಡೆಗೆ ಮಂಜೂರಾತಿ ಕೊಟ್ಟಿದ್ದಾರೆ.ಅದರಲ್ಲಿ ಸಂಪೂರ್ಣ ಹಾನಿಯಾದ ‘ಎ’ ವರ್ಗದ ಮನೆಗಳಿಗೆ 1314ಮನೆಗಳು, ‘ಬಿ’ ವರ್ಗದ 1925ಮನೆಗಳಿಗೆ ತಲಾ 5ಲಕ್ಷ ಅನುದಾನ ಹಾಗೂ ‘ಸಿ’ ವರ್ಗದ 4361ಮನೆಗಳು ತಲಾ 50ಸಾವಿರ ಅನುದಾನ ಬಿಡುಗಡೆ ಮಾಡಿದ್ದಾರೆ.ತಂತ್ರಾಂಶದಲ್ಲಿ ತೊಂದರೆ ಇರುವ ಅವಕಾಶ ವಂಚಿತರಾದ ಜನರಿಗೆ ಮತ್ತೊಮ್ಮೆ ತಂತ್ರಾಂಶದಲ್ಲಿ ಅಳವಡಿಸಿ ಮಂಜೂರಾತಿ ಮಾಡಿಕೊಟ್ಟಿದ್ದು ಜಿಲ್ಲೆಯ ಜನತೆಯ ಪರವಾಗಿ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕವಟಗಿಮಠ ತಿಳಿಸಿದರು.

Tags:

error: Content is protected !!