hubbali

ಸಿಎಂ ತವರಲ್ಲೇ ಗ್ರಾ.ಪಂ ಪಿಡಿಓ ಕರ್ಮಕಾಂಡ, ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ ವಂಚನೆ ಆರೋಪ..!

Share

ಸ್ವಚ್ಛತೆ ಹೆಸರಿನಲ್ಲಿ ಆ ಪಿಡಿಓ ಕಳ್ಳ ದಂಧೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರದಲ್ಲೇ ಲಕ್ಷಾಂತರ ಹಗರಣ ಆದರೂ ಕೂಡ ಮೇಲಾಧಿಕಾರಿಗಳು ಡೋಂಟ್ ಕೇರ್ ಎಂಬಂತೆ ಸುಮ್ಮನಿದ್ದಾರೆ. ಗ್ರಾಮಸ್ಥರು ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಅಂತವರಿಗೆ ಅಧಿಕಾರಿಗಳೇ ಎಚ್ಚರಿಕೆ ಕೊಡ್ತಾರೆ. ಇದರಿಂದ ಬೇಸತ್ತ ಗ್ರಾಮಸ್ಥರು ಎಲ್ಲ ದಾಖಲೆಗಳೊಂದಿಗೆ ಮಾಧ್ಯಮದ ಮುಂದೆ ಬಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನಮಗೆ ನ್ಯಾಯ ಕೊಡಿಸಿ ಅಂತ ಮನವಿ ಮಾಡಿಕೊಂಡಿದ್ದಾರೆ. ಇದೆಲ್ಲ ನಡೆದಿದ್ದು ಎಲ್ಲಿ ಅಂತ ಹೇಳ್ತೀವಿ ಈ ವರದಿ ನೋಡಿ

ಸಿಎಂ ಬೊಮ್ಮಾಯಿ ಕ್ಷೇತ್ರದಲ್ಲೇ ನಡೆಯುತ್ತಿದೆ ಲಕ್ಷಾಂತರ ರೂ. ಹಗರಣ
ಕೈಯಲ್ಲಿ ದಾಖಲೆ ಹಿಡಿದು ಪಿಡಿಓ ಪ್ರಕಾಶ ವಿರುದ್ಧ ಗ್ರಾಮಸ್ಥರ ಆಕ್ರೋಶ
ನಕಲಿ ನಕಲಿ ಎಲ್ಲವೂ ನಕಲಿ ಕುನ್ನೂರ ಗ್ರಾಪಂ ಪಿಡಿಓ ಕರ್ಮಕಾಂಡ

ಹೌದು.. ಹೀಗೆ ಕೈಯಲ್ಲಿ ದಾಖಲೆಗಳನ್ನು ಹಿಡಿದುಕೊಂಡು ನ್ಯಾಯ ಕೇಳುತ್ತಿರುವ ಇವರೆಲ್ಲರೂ, ಶಿಗ್ಗಾಂವ ತಾಲ್ಲೂಕಿನ ಕುನ್ನೂರ ಗ್ರಾಮ ಪಂಚಾಯತಿಗೆ ಸಂಬಂಧಿಸಿದ ಸದಸ್ಯರು ಹಾಗೂ ಗ್ರಾಮಸ್ಥರು. ಪಂಚಾಯತಿ ಪಿಡಿಓ ಪ್ರಕಾಶ ಔಂದಕರ್ ಮಾಡಿದ ಹಗರಣದ ಬಗ್ಗೆ ಸ್ವತಃ ದಾಖಲೆಗಳ ಸಮೇತ ಬಂದಿದ್ದಾರೆ. ಈ ಪಂಚಾಯತಿಗೆ ಮೂರು ಗ್ರಾಮಗಳು ಸೇರುತ್ತವೆ. ಸುಮಾರು 11 ವರ್ಷಗಳಿಂದ ಇದೇ ಗ್ರಾಮ ಪಂಚಾಯತಿಯಲ್ಲಿ ಝಾಂಡಾ ಊರಿರುವ ಪಿ.ಡಿ.ಓ ಪ್ರಕಾಶ ಔಂದಕರ ನಮಗೆ ಮೋಸ ಮಾಡ್ತಿದ್ದಾರೆ. ಊರು ಸ್ವಚ್ಛ ಮಾಡೋದಾಗಿ ಹೇಳಿ ಜನರಿಗೆ ಮಂಕು ಬೂದಿ ಎರಚಿ, ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂಪಾಯಿ ಗುಳುಂ ಮಾಡಿದ್ದಾರೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಂತ ಕ್ಷೇತ್ರದಲ್ಲೇ ಯಾವುದೆ ಭಯ ಇಲ್ಲದೆ ರಾಜರೋಷವಾಗಿ ವಂಚನೆ ಮಾಡತ್ತಲೇ ಬಂದಿದ್ದಾರೆ ಈ ಪಿಡಿಓ. ಗ್ರಾಮದ ಜನರು ಪಿಡಿಓ ಹಗರಣದ ಬಗ್ಗೆ ಈಗಾಗಲೇ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಸಿಎಂ ಬೊಮ್ಮಾಯಿ ಅವರು ತನಿಖೆ ನಡೆಸಲು ಸೂಚಿಸಿದ್ದಾರಂತೆ

ಗ್ರಾಮವನ್ನು ಉದ್ಧಾರ ಮಾಡಬೇಕಾಗಿದ್ದ ಅಧಿಕಾರಿಗಳು, ನಕಲಿ ದಾಖಲೆಯನ್ನು ಸೃಷ್ಟಿಸಿ ಗ್ರಾಮಸ್ಥರಿಗೆ ಮೋಸ ಮಾಡಿ ಹಣ ಪೀಕುತ್ತಿದ್ದಾರೆ. ಈ ಹಗರಣಕ್ಕೆ ಮೇಲಾಧಿಕಾರಿಗಳು ಯಾವಾಗ ಫುಲ್ ಸ್ಟಾಪ್ ಹಾಕ್ತಾರೆ ಅನ್ನೋದನ್ನ ಕಾದು ನೋಡಬೇಕಿದ

Tags:

error: Content is protected !!