sucide

ಸಾಲಬಾಧೆ: ನಿವೃತ್ತ ಯೋಧ ಆತ್ಮಹತ್ಯೆಗೆ ಶರಣು

Share

ಸಾಲಬಾಧೆ ತಾಳಲಾರದೆ ನಿವೃತ್ತ ಬಿಎಸ್‌ಎಫ್ ಯೋಧ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ನಡೆದಿದೆ. ಕಕ್ಕಳಮೇಲಿ ಗ್ರಾಮದ ನಿವಾಸಿ ರೇವಣ್ಣಸಿದ್ದ ಗಾಣಿಗೇರ ಊರ್ಫ್ ದೇಸಾಯಿ ನೇಣಿಗೆ ಶರಣಾಗಿದ್ದಾರೆ. ನಿವೃತ್ತ ಯೋಧ ರೇವಣ್ಣಸಿದ್ದ ಸಾಲಬಾಧೆಯಿಂದ ಮಾನಸಿಕವಾಗಿ ಮನನೊಂದು ಕೊಂಡಿದ್ದರು ಅಲ್ಲದೇ ಜೀವನದಲ್ಲಿ ಜಿಗುಪ್ಸೆಗೊಂಡು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!