ಸಚಿವೆ ಶಶಿಕಲಾ ಜೊಲ್ಲೆ ಮೇಲಿನ ಬ್ರಷ್ಠಾಚಾರ ಕುರಿತಂತೆ ಎಫ್‍ಐಆರ್ ದಾಖಲಿಸಲು ಹಿಂದೇಟು ಹಾಕುತ್ತಿರುವ ಬ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಮೇಲೆ ಜೆಎಮ್‍ಎಫ್‍ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಸಿದ್ದೇನೆ ಎಂದು ಆರ್‍ಟಿಐ ಕಾರ್ಯಕರ್ತರಾದ ಭೀಮಪ್ಪ ಗಡಾದ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಭೀಮಪ್ಪಾ ಗಡಾದ್‍ರವರು, ಸಚಿವೆ ಶಶಿಕಲಾ ಜೊಲ್ಲೆರವರು ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದಾಗ ಅಂಗನವಾಡಿಗಳಲ್ಲಿ ಮಕ್ಕಳಿಗೆ ಅಪೌಷ್ಟಿಕತೆಯನ್ನು ಹೋಗಲಾಡಿಸುವ ಉದ್ದೇಶದಿಂದ ಮೊಟ್ಟೆಯನ್ನು ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿತ್ತು. ಈ ವೇಳೆ ಟೆಂಡರ್ ನೀಡಲು ಸಚಿವೆ ಶಶಿಕಲಾ ಜೊಲ್ಲೆ ಬ್ರಮ್ಹಾಂಡ ಬ್ರಷ್ಟಾಚಾರ ಮಾಡಿದ್ದಾರೆನ್ನುವ ವಿಡಿಯೋ ರಾಜ್ಯಾದ್ಯಂತ ಹರಿದಾಡುತ್ತಿತ್ತು. ಇನ್ನು ಈ ಕುರಿತಂತೆ ಖಾಸಗಿ ಮಾಧ್ಯಮವೊಂದು ಸುದ್ದಿಯನ್ನೂ ಕೂಡ ಪ್ರಸಾರ ಮಾಡಿತ್ತು. ಈ ಕುರಿತಂತೆ ಸಚಿವೆ ಶಶಿಕಲಾ ಜೊಲ್ಲೆ ಮೇಲೆ ಕ್ರಮ ಕೈಗೊಳ್ಳುವಂತೆ ಬ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಈ ಕುರಿತಂತೆ ಎಲ್ಲಾ ಮೂಲ ದಾಖಲೆಗಳನ್ನು ಒದಗಿಸುವಂತೆ ಎಸಿಬಿ ಪೊಲೀಸರು ಕೇಳಿದ್ದರು. ನಾನು ಅವರಿಗೆ ಎಲ್ಲಾ ಸೂಕ್ತ ದಾಖಲೆಗಳನ್ನು ಎರಡು ದಿನಗಳ ವಳಗಾಗಿ ಒದಗಿಸಿದ್ದೇನೆ ಆದರೆ ಈವರೆಗೂ ಸಚಿವೆ ಶಶಿಕಲಾ ಜೊಲ್ಲೆ ಮೇಲೆ ಎಫ್‍ಐಆರ್ ದಾಖಲಿದ ಬ್ರಷ್ಟಾಚಾರ ನಿಗ್ರಹ ದಳದ ಎಸ್‍ಪಿ ಹಾಗೂ ಡಿವೈಎಸ್‍ಪಿ ವಿರುದ್ಧ ಜೆಎಮ್‍ಎಫ್‍ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.
ಬೈಟ್:
ವಿ/ವೊ: ಬ್ರಷ್ಟಾಚಾರ ನಿಗ್ರಹ ದಳ ಇರುವುದೇ ಬ್ರಷ್ಟರನ್ನು ಬಯಲಿಗೆ ಎಳೆಯುವುದಕ್ಕೆ, ಇನ್ನು ಬ್ರಷ್ಟಾಚಾರ ಕುರಿತಂತೆ ದೂರು ಬಂದರೂ ಕ್ರಮ ಕೈಗೊಳ್ಳದ ಎಸ್‍ಪಿ ಹಾಗೂ ಡಿವೈಎಸ್‍ಪಿ ವಿರುದ್ಧ ಭೀಮಪ್ಪ ಗಡಾದ್ ಕಿಡಿಕಾರಿದ್ದಾರೆ. ಯಾರಾದರೇನು … ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
