ರಾಜ್ಯದಲ್ಲಿ ಲಾಕ್‍ಡೌನ್ ಮಾಡುವ ಚಿಂತನೆ ಸರ್ಕಾರಕ್ಕೆ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್ ಯಾರೂ ಕೂಡ ಪಾಸಿಟಿವಿಟಿ ಬಗ್ಗೆ ಬಹಳ ಚಿಂತೆ ಮಾಡುವುದು ಬೇಡ. ಅದು ಹೆಚ್ಚು ಆಗಿಯೇ ಆಗುತ್ತದೆ. ಆದರೆ ನಾವು ಲಸಿಕಾಕರಣ ಬಹಳ ಅದ್ಭುತವಾಗಿ, ಯಶಸ್ವಿಯಾಗಿ ಮಾಡಿರುವುದರಿಂದ ಯಾರಿಗೂ ತೀವ್ರತೆ ಇರುವುದಿಲ್ಲ. ಇನ್ನು ಸಂಪೂರ್ಣ ಲಾಕ್‍ಡೌನ್ ವಿಚಾರವನ್ನೇ ಸರ್ಕಾರ ಮಾಡಿಲ್ಲ. ಲಾಕ್‍ಡೌನ್ ಎಂಬುದು ಕಳೆದು ಹೋಗಿರುವ ನೀತಿ ಬಗ್ಗೆ ಚಿಂತಿಸೋದು ಬೇಡ. ಜನಸಾಮಾನ್ಯರ ಬದುಕಿಗೆ ತೊಂದರೆ ಕೊಡದ ರೀತಿಯಲ್ಲಿ ಜನರ ರಕ್ಷಣೆ ಮಾಡುವ ವಿನೂತನ ಮತ್ತು ವಿಶೇಷ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.