ನಾಡಿನ ಸಮಸ್ತ ಜನತೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಕರ ಸಂಕ್ರಮಣದ ಶುಭಾಶಯಗಳನ್ನು ಕೋರಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಕೋರಿರುವ ಸಿಎಂ ಬೊಮ್ಮಾಯಿ ಅವರು ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ತನ್ನ ಪಥ ಬದಲಿಸುವ ಈ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರ ಹೊಸ ಕನಸು, ಆಸೆ ಆಕಾಂಕ್ಷೆಗಳೆಲ್ಲವೂ ಈಡೇರಿ, ಎಲ್ಲರ ಬಾಳಿನಲ್ಲಿ ಹೊಸ ಚೈತನ್ಯ ಮೂಡಲಿ, ಸಂಕ್ರಮಣದ ಪರ್ವ ಕಾಲ ಬಾಳಿನಲ್ಲಿ ಶುಭ ತರಲಿ. ಕೊರೊನಾ ವಿರುದ್ದ ಒಟ್ಟಾಗಿ ಹೋರಾಡಿ, ಭಾರತವನ್ನು ಕೊರೊನಾ ಮುಕ್ತವನ್ನಾಗಿ ಮಾಡೋಣ ಎಂದಿದ್ದಾರೆ.