Hukkeri

ಸಂಕೇಶ್ವರ : ವಾರ್ಡುಗಳ ಆದ್ಯತೆ ಮೇರೆಗೆ ನಗರ ಸ್ವಚ್ಛತೆ ಮಾಡಿ: ಪವನ ಕತ್ತಿ

Share

ಸಂಕೇಶ್ವರ ನಗರದ ಸ್ವಚ್ಛತೆಗೆ ವಾರ್ಡುಗಳ ಆದ್ಯತೆಯ ಮೇರೆಗೆ ಸ್ವಚ್ಚತಾ ಕಾರ್ಯ ಮಾಡಬೇಕೆಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪವನ ಕತ್ತಿ ಪುರಸಭೆ ಅಧಿಕಾರಿಗಳಿಗೆ ತಾಖೀತು ಮಾಡಿದರು.ಸಂಕೇಶ್ವರ ಪಟ್ಟಣದಲ್ಲಿ ಕಾರ್ಮಿಕರಿಗೆ ಕೀಟ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದಾಗ ವಾರ್ಡ ನಂಬರ 16 ಸದಸ್ಯೆ ವಿದ್ಯಾ ಬಾಬರೆ ಪತಿ ರಾಜು ಬಾಬರೆ ನಮ್ಮ ವಾರ್ಡಗಳಲ್ಲಿ ಗಟಾರು, ಕಸ, ತ್ಯಾಜ್ಯಗಳ ಸ್ವಚ್ಚತೆ ಮಾಡುತ್ತಿಲ್ಲಾ ಎಂದು ಏರು ಧ್ವನಿಯಲ್ಲಿ ಆರೋಪ ಮಾಡಿ ಕೂಗಾಡಲು ಪ್ರಾರಂಭಿಸಿದರು. ಕೂಡಲೆ ಮಧ್ಯ ಪ್ರವೇಶಿಸಿದ ಪವನ ಕತ್ತಿ ಸಮಾರಂಭದಲ್ಲಿ ಈ ರೀತಿಯ ವರ್ತನೆ ಸರಿಯಲ್ಲ ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸಲಾಗುವದು ಎಂದು ತಿಳಿ ಹೇಳಿ ಮುಖ್ಯಾಧಿಕಾರಿ ಜಗದೀಶ ಈಟಿ ಯವರಿಂದ ಮಾಹಿತಿ ಪಡೆದು ಪ್ರತಿ ವಾರ್ಡುಗಳಲ್ಲಿಯ ಸ್ವಚ್ಚತಾ ಕಾರ್ಯವನ್ನು ಆದ್ಯತೆ ಮೇರೆಗೆ ಕೈಕೊಳ್ಳಬೇಕು, ಪ್ರತಿ ದಿನ ಒಂದೊಂದು ವಾರ್ಡಿನಂತೆ ಸ್ವಚ್ಛತೆಗೆ ಗಮನ ಹರಿಸಿ ಎಂದು ಹೇಳಿದರು.

ಕೂಡಲೇ ಕಾರ್ಯಪ್ರವೃತ್ತರಾದ ಪುರಸಭೆ ಅಧಿಕಾರಿಗಳು ವಾರ್ಡ ನಂಬರ 16ರಲ್ಲಿ ಜೆಸಿಬಿ ಮೂಲಕ ಸ್ವಚ್ಚತೆ ಮಾಡಿದರು. ಸಂಕೇಶ್ವರ ಪಟ್ಟಣದ ಎಲ್ಲಾ ವಾರ್ಡಗಳಲ್ಲಿ ಕಾಮಗಾರಿ ಕೈಕೋಳ್ಳಲು ಸಾಕಷ್ಟು ಅನುದಾನ ಬಂದಿಲ್ಲಾ ಈಗಾಗಲೇ ಕ್ರಿಯಾ ಯೋಜನೆ ರೂಪಿಸಲಾಗಿದೆ ಅನುದಾನ ಬಂದ ಮೇಲೆ ಆಡಳಿತ ಮಂಡಳಿ ಅನುಮೋದನೆ ಪಡೆದು ಅಭಿವೃದ್ಧಿ ಕಾರ್ಯ ಮಾಡಲಾಗುವದು ಎಂದು ಮುಖ್ಯಾಧಿಕಾರಿ ಜಗದೀಶ ಈಟಿ ದೂರವಾಣಿ ಮೂಲಕ ಇನ್ ನ್ಯೂಜಗೆ ಮಾಹಿತಿ ನೀಡಿದರು.

ಈ ವೇಳೆ ಇಲ್ಲಿನ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

 

Tags:

error: Content is protected !!