Belagavi

ಶ್ರೇಯಸ್ ಅಪಾರ್ಟಮೆಂಟ್ ನಿವಾಸಿಗಳಿಂದ ನಗರ ಸೇವಕ ನಿತಿನ್ ಜಾಧವ್‍ಗೆ ಸನ್ಮಾನ

Share

ಬೆಳಗಾವಿಯ ಟಿಳಕವಾಡಿಯ ವಾರ್ಡ್‍ನಂ 29ರ ಶ್ರೇಯಸ್ ಅಪಾರ್ಟ್‍ಮೆಂಟ್ ನಿವಾಸಿಗಳು ನಗರ ಸೇವಕರಾದ ನಿತಿನ್ ಜಾಧವ್‍ರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ರಹವಾಸಿಗಳು ಸ್ಥಳೀಯ ಸಮಸ್ಯೆಗಳನ್ನು ಕುರಿತಂತೆ ನಗರ ಸೇವಕ ನಿತಿನ್ ಜಾಧವ್‍ರವರಿಗೆ ಮನವಿ ಮಾಡಿದ್ದರು. ಈ ವೇಳೆ ಪಾಲಿಕೆಯ ಸ್ವಚ್ಛತಾ ಅಧಿಕಾರಿಗಳು ಹಾಗೂ ಎಲ್ ಆಂಡ್ ಟಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಗಳನ್ನು ವೀಕ್ಷಿಸಿದರು. ಇನ್ನು ನಾಲ್ಕು ದಿನಗಳಲ್ಲಿ ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಈ ವೇಳೆ ಸಂತೋಷ ಪಾಟೀಲ್, ಶಿವರಾಜ್ ಬಲ್ಲೋಳಿ, ವರ್ಷಾ ಪೆಡನೇಕರ್, ಇನ್ನುಳಿದ ನಾಯಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Tags:

error: Content is protected !!