ಕಾಗವಾಡ ತಾಲೂಕಿನ ಶೇಡಬಾಳದ ಮುನಿಮಹಾರಾಜ್ ರಾಷ್ಟ್ರಸಂತ ವಿದ್ಯಾನಂದ ಮುನಿಮಹಾರಾಜರ ಪುತ್ಥಳಿಯನ್ನು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.

ಸೋಮವಾರ ಶೇಡಬಾಳದ ಆಚಾರ್ಯ ಶ್ರೀ ವಿದ್ಯಾನಂದ ಕನ್ನಡ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಿಸಿರುವ ವಿದ್ಯಾನಂದ ಮಹಾರಾಜರ ಪುತ್ಥಳಿ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅತ್ಯಂತ ಸುಂದರವಾಗಿ ನಿರ್ಮಾಣ ಆಗಿರುವ ವಿದ್ಯಾನಂದ ಮಹಾರಾಜರ ಪುತ್ಥಳಿಯನ್ನು ಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಇದೇ ವೇಳೆ ಉಗಾರ ಖ್ಯಾತ ಲೇಖಕರಾದ ಡಾ.ರಾಜೇಂದ್ರ ಸಾಂಗವೆ ಇವರು ರಚಿಸಿದ “ಶೇಡಬಾಳದ ಸಪ್ತ ರತ್ನಗಳು” ಮತ್ತು “ಶೇಡಬಾಳದ ಬಾಲಕ ಸುರೇಂದ್ರ-ಆಚಾರ್ಯ ಶ್ರೀ ವಿದ್ಯಾನಂದರು” ಬರೆದ ಕೃತಿಗಳನ್ನು ಸಿದ್ದೇಶ್ವರ ಸ್ವಾಮೀಜಿ ಬಿಡುಗಡೆ ಮಾಡಿದರು.ನಂತರ ಆಶೀರ್ವಚನ ನೀಡಿದ ಸಿದ್ದೇಶ್ವರ ಸ್ವಾಮೀಜಿ ಶೇಡಬಾಳ ಸಮೃದ್ಧ ಗ್ರಾಮ, ಫಲವತ್ತಾದ ಭೂಮಿ, ಹಸಿರು ಪರಿಸರ, ಧರ್ಮ, ಸಾಹಿತ್ಯ, ಹಾಗೂ ಸಂಸ್ಕøತಿಯ ಪ್ರತೀಕವಾಗಿದೆ. ಧರ್ಮ ಪಥಗಾಮಿ ಮುನಿಗಳ ನೆಲೆ, ಸ್ವಾಧ್ಯಾಯನಿಷ್ಠ ಸಾಹಿತಿಗಳ, ಕಲೆಗಾರರ, ಜನ ಸೇವಾ ಸಂತರ ಬೀಡಾಗಿದೆ. ರಾಷ್ಟ್ರಸಂತ ವಿದ್ಯಾನಂದ ಮುನಿ ಮಹಾರಾಜರು ಈ ಗ್ರಾಮದ ಸುಪುತ್ರರು ಇಲ್ಲಿ ಜನಿಸಿ ನಾಡಿಗೆ ಅಹಿಂಸಾ ತತ್ವÀಗಳ, ಧರ್ಮಗಳ ಉಪದೇಶ ನೀಡಿದ್ದಾರೆ. ಇವರು ಧರ್ಮ ಹಾಗೂ ಸಮಾಜಕ್ಕೆ ವಿಶೇಷ ಕೊಡುಗೆ ಕೊಟ್ಟಿದ್ದಾರೆ. ಅವರ ಸಂದೇಶ ಇಂದಿನ ಎಲ್ಲ ಯುವಕರು ಪಾಲನೆ ಮಾಡಬೇಕು. ಖ್ಯಾತ ಸಾಹಿತಿ ಮಿರ್ಜಿ ಅಣ್ಣಾರಾಯರು ಕೂಡ ಇದೇ ಗ್ರಾಮದ ಸುಪುತ್ರರು ಎಂದು ಸ್ಮರಿಸಿಕೊಂಡರು.
ಇದೇ ವೇಲೆ ಅಥಣಿ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ ಗಡಿನಾಡಿನ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮವು ಅನೇಕ ಪುಣ್ಯಾತ್ಮರರ ಪರಂಧಾಮ. ಇಲ್ಲಿಗೆ ಕನ್ನಡಪ್ರಜ್ಞೆ, ಭಾವೈಕ್ಯತೆ, ಶಿಕ್ಷಣ, ಸಮಾನತೆಯ ಸಾಂಸ್ಕøತಿಕ ಕೇಂದ್ರ ಎನಿಸಿದೆ. ಈ ಗ್ರಾಮದ ಸುಪುತ್ರ ಪೂಜನೀಯ ಆಚಾರ್ಯ ವಿದ್ಯಾನಂದ ಮಹಾಗುರುಗಳು ತಮ್ಮ ಸಾಧನೆಯ ಮೂಲಕ ಸಿದ್ಧಿಯ ಶೃಂಗವನ್ನೇರಿದಾರೆ. ಮುನಿ ಮಹಾರಾಜರು ಶೇಡಬಾಳ ಗ್ರಾಮದಿಂದ ದಿಲ್ಲಿವರೆಗೆ ಹೋಗಿ ಅಲ್ಲಿಗೆ ಅಹಿಂಸಾ ತತ್ವವನ್ನು ಪಸರಿಸಿದ್ದರು ಎಂದರು.
ಕಾರ್ಯಕ್ರಮದಲ್ಲಿ ಇಚಲಕರಂಜಿಯ ಮಹೇಶ ಆನಂದ ಸ್ವಾಮೀಜಿ, ಸಂಸ್ಥೆಯ ಸಂಸ್ಥಾಪಕ ಪ್ರಕಾಶ್ ನಾಂದರೆ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನೇಮಿನಾಥ ನರಸಗೌಡರ್, ಭರತ ನಾಂದ್ರೆ, ರಾಜು ನಾಂದ್ರೆ, ಮುಖ್ಯ ಅಧ್ಯಾಪಕ ಬಾಹುಬಲಿ, ಡಾ.ರಾಜೇಂದ್ರ ಸಾಂಗಾವೆ ನಾಂದ್ರೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.